Ashwaveega News 24×7 ಮಾರ್ಚ್ 08 – 2026 : ರಿಯಾಲಿಟಿ ಶೋ ಸ್ಪರ್ಧಿ Rajat Kishan ವಿರುದ್ಧ ವಿವಾದ ಮತ್ತಷ್ಟು ಗಂಭೀರವಾಗುತ್ತಿದೆ. ಬೆಳಗ್ಗೆ ವಾಟ್ಸಪ್ ಚಾಟ್ ಹೊರಬಂದಿದ್ದರೆ, ಇದೀಗ ಹೊಸ ಆಡಿಯೋ ಕ್ಲಿಪ್ ಒಂದು ಹೊರಬಿದ್ದಿದೆ.
ದೂರುದಾರರಾದ Girish ಹಾಗೂ Dog Satish ಈ ಆಡಿಯೋವನ್ನು ಬಿಡುಗಡೆ ಮಾಡಿರುವುದಾಗಿ ತಿಳಿದುಬಂದಿದೆ. ಆಡಿಯೋದಲ್ಲಿ ಗಿರೀಶ್ ಮತ್ತು ರಜತ್ ನಡುವೆ ನಡೆದ ಮಾತುಕತೆ ಕೇಳಿಸಿಕೊಳ್ಳುತ್ತಿದೆ ..
ಆಡಿಯೋದಲ್ಲಿ ಡಾಗ್ ಸತೀಶ್ ಅವರ ಮನೆಯ ಸ್ಥಳವನ್ನು ತೋರಿಸುವಂತೆ ಒತ್ತಾಯ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಬೆಳವಣಿಗೆ ರಜತ್ ವಿರುದ್ಧ ದಾಖಲಾಗಿರುವ FIR ಗೆ ಮತ್ತಷ್ಟು ತೀವ್ರತೆ ತಂದಿದೆ.
ವಾಟ್ಸಪ್ ಚಾಟ್ ಹಾಗೂ ಆಡಿಯೋ ಬಿಡುಗಡೆ ನಂತರ Bigg Boss Kannada ಸ್ಪರ್ಧಿ ರಜತ್ಗೆ ಡಬಲ್ ಸಂಕಷ್ಟ ಎದುರಾಗಿದೆ. ಪ್ರಕರಣದ ತನಿಖೆ ಮುಂದುವರೆದಿದ್ದು, ಯಾವುದೇ ಕ್ಷಣದಲ್ಲಿ ರಜತ್ ಬಂಧನವಾಗುವ ಸಾಧ್ಯತೆ ಇದೆ ಎಂಬ ಚರ್ಚೆಯೂ ನಡೆಯುತ್ತಿದೆ.
