Ashwaveega News 24×7 ಮಾರ್ಚ್ 09 – 2026 : ಟಾಲಿವುಡ್ನಲ್ಲಿ ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಸಂಬಂಧದ ಬಗ್ಗೆ ಸಾಕಷ್ಟು ದಿನಗಳಿಂದಲೇ ಚರ್ಚೆಗಳು ನಡೆಯುತ್ತಿವೆ . ಈ ನಡುವೆ ವಿಜಯ್ ಅವರ ಕುಟುಂಬದ ಸದಸ್ಯರಾದ ಸೋದರ ಮಾವ ಯಶ್ ರಂಗಿನೇನಿ, ವಿಜಯ್ ಕುರಿತು ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಯಶ್ ರಂಗಿನೇನಿ ಹೇಳುವಂತೆ, ಒಂದು ಕಾಲದಲ್ಲಿ ವಿಜಯ್ ದೇವರಕೊಂಡ ಅವರಿಗೆ ಮದುವೆಯ ಬಗ್ಗೆ ಅಷ್ಟು ಆಸಕ್ತಿ ಇರಲಿಲ್ಲ. “ಮದುವೆ ಬೇಡ” ಎನ್ನುವ ಮನಸ್ಥಿತಿಯಲ್ಲೇ ವಿಜಯ್ ಇದ್ದರು. ಆದರೆ ನಂತರ ರಶ್ಮಿಕಾ ಮಂದಣ್ಣ ಪರಿಚಯವಾದ ಮೇಲೆ ಅವರ ಆಲೋಚನೆಗಳಲ್ಲಿ ಸಾಕಷ್ಟು ಬದಲಾವಣೆ ಕಂಡುಬಂದಿತಂತೆ.
ವಿಜಯ್ ಮತ್ತು ರಶ್ಮಿಕಾ ನಡುವಿನ ಸ್ನೇಹ ಡಿಯರ್ ಕಾಮ್ರೆಡ್ ಸಿನಿಮಾ ಸಮಯದಲ್ಲಿ ಮತ್ತಷ್ಟು ಗಾಢವಾಯಿತು . ಆ ಸಮಯದಿಂದಲೇ ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ .
ವಿಜಯ್ ಅವರು ರಶ್ಮಿಕಾ ಬಗ್ಗೆ ಮನೆಯವರ ಬಳಿ ಹೇಳಿದಾಗ ಮೊದಲಿಗೆ ಕುಟುಂಬದವರಿಗೆ ಸ್ವಲ್ಪ ಶಾಕ್ ಆಗಿತ್ತಂತೆ. ಸಿನಿಮಾರಂಗದಲ್ಲಿ ಹಲವು ಜೋಡಿಗಳು ವಿಚ್ಛೇದನವಾಗುತ್ತಿರುವುದನ್ನು ನೋಡುತ್ತಿರುವ ಹಿನ್ನೆಲೆಯಲ್ಲಿ ಕುಟುಂಬದವರಿಗೆ ಒಂದು ಕ್ಷಣ ಆತಂಕವೂ ಉಂಟಾಗಿತ್ತಂತೆ. ಆದರೆ ನಂತರ ರಶ್ಮಿಕಾ ಬಗ್ಗೆ ತಿಳಿದುಕೊಂಡ ಮೇಲೆ ಆ ಆತಂಕ ದೂರವಾಯಿತು ಎಂದು ಯಶ್ ಹೇಳಿದ್ದಾರೆ.
“ರಶ್ಮಿಕಾ ಒಳ್ಳೆಯ ಹುಡುಗಿ. ಈ ಮದುವೆ ನಮಗೆಲ್ಲಾ ತುಂಬಾ ಖುಷಿ ಕೊಡುತ್ತದೆ. ಇವರಿಬ್ಬರ ನಡುವೆ ಉತ್ತಮ ಬಾಂಧವ್ಯ ಮತ್ತು ಅರ್ಥೈಸಿಕೊಳ್ಳುವ ಗುಣ ಇದೆ. ಅವರನ್ನು ನೋಡಿದಾಗ ಭವಿಷ್ಯದ ಬಗ್ಗೆ ಅನುಮಾನವೇ ಬರುತ್ತಿಲ್ಲ” . ಆದರೂ ಜೀವನದಲ್ಲಿ ಮುಂದೆ ಏನಾಗುತ್ತದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಆದರೆ ಇವರಿಬ್ಬರೂ ಜೀವನದುದ್ದಕ್ಕೂ ಸಂತೋಷದಿಂದ ಇರಲಿ ಎನ್ನುವುದು ಕುಟುಂಬದ ಆಶಯ ಎಂದು ಹೇಳಿದ್ದಾರೆ.
ಇದಲ್ಲದೆ, ವಿಜಯ್ ದೇವರಕೊಂಡ ಅವರ ವ್ಯಕ್ತಿತ್ವದ ಬಗ್ಗೆ ಕೂಡ ಯಶ್ ಆಸಕ್ತಿದಾಯಕ ವಿಷಯ ಹಂಚಿಕೊಂಡಿದ್ದಾರೆ. ಹೊರಗೆ ನೋಡಿದರೆ ವಿಜಯ್ “ರೌಡಿ ಬಾಯ್” ಇಮೇಜ್ನಲ್ಲಿರುವಂತೆ ಕಾಣಿಸಿದರೂ, ಅವರು ತುಂಬಾ ಭಾವನಾತ್ಮಕ ವ್ಯಕ್ತಿ ಎಂದು ಹೇಳಿದ್ದಾರೆ.
ಟ್ಯಾಕ್ಸಿವಾಲಾ ಸಿನಿಮಾ ರಿಲೀಸ್ಗೆ ಮುನ್ನವೇ ಲೀಕ್ ಆಗಿದ್ದಾಗ ವಿಜಯ್ ತುಂಬಾ ಬೇಸರಗೊಂಡು ಅತ್ತಿದ್ದ ಸಂದರ್ಭವೂ ಇದೆ ಎಂದು ಅವರು ನೆನಪಿಸಿಕೊಂಡಿದ್ದಾರೆ.ಹೀಗಾಗಿ ಹೊರಗೆ ಗಟ್ಟಿಯಾಗಿ ಕಾಣಿಸುವ ವಿಜಯ್ ದೇವರಕೊಂಡ ಒಳಗಿನಿಂದ ತುಂಬಾ ಎಮೋಷನಲ್ ವ್ಯಕ್ತಿ ಎಂಬುದು ಅವರ ಕುಟುಂಬದವರ ಮಾತುಗಳಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ.
