Ashwaveega News 24×7 ಮಾರ್ಚ್ 09 – 2026 : ಬೆಂಗಳೂರು : ರಾಜಕೀಯ ಲೋಕದಲ್ಲಿ ಇದೀಗ ಚರ್ಚೆಗೆ ಕಾರಣವಾಗಿರುವ ಹಿಂದೂ ಹುಲಿ ಎಂದೇ ಪರಿಚಿತರಾದ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ರಾಜಕೀಯ ಪಕ್ಷ ಘೋಷಣೆ ಮಾಡಿದ್ದಾರೆ. ಅವರ ದೆಹಲಿ ಪ್ರವಾಸವನ್ನು ಕೇಂದ್ರ ಪಕ್ಷದ ನಾಯಕರ ಭೇಟಿಗೆ ಸಂಬಂಧಿಸಿದ್ದಂತೆ ಕೆಲವು ಮೂಲಗಳು ಊಹಾಪೋಹ ಮಾಡುತ್ತಿದ್ದ ಸಂದರ್ಭದಲ್ಲಿ, ಯತ್ನಾಳ್ ಖುದ್ದಾಗಿ ಸ್ಪಷ್ಟನೆ ನೀಡಿದ್ದಾರೆ.
ಯತ್ನಾಳ್ ಹೇಳಿದ್ದಾರೆ, “ನಾನು ಬಿಜೆಪಿ ಹೈಕಮಾಂಡ್ ನಾಯಕರ ಭೇಟಿಗಾಗಿ ದೆಹಲಿಗೆ ಬಂದಿಲ್ಲ. ನನ್ನ ಪ್ರವಾಸ ಮಗನ ಮದುವೆ ನಿಮಿತ್ತ. ಕೆಲವರ ಭೇಟಿ, ಸಂಪರ್ಕ, ಅಥವಾ ‘ಕಾಲಿಗೆ ಬಿದ್ದು ಪಕ್ಷ ಸೇರಿಸಿಕೊಳ್ಳಿ’ ಎಂಬ ವಿನಂತಿ ಮಾಡುವುದಕ್ಕೆ ನಾನು ಹೋಗಿಲ್ಲ” ಎಂದು ಖಚಿತಪಡಿಸಿದ್ದಾರೆ.
“ರಾಜ್ಯದಲ್ಲಿಕಡುಭ್ರಷ್ಟಕುಟುಂಬಬಿಜೆಪಿಯಲ್ಲಿಇದ್ದರೆ, ನಾನುಪಕ್ಷಸೇರಲ್ಲ. BSY, BYV, BYR ಅವರಹಿಡಿತದವರೆಗೂನಾನುಸೇರುವುದಿಲ್ಲ. ನಾನುಪ್ರಾದೇಶಿಕಪಕ್ಷಮಾಡ್ತಿನಿ. 2028ಕ್ಕೆನಾನುಮುಖ್ಯಮಂತ್ರಿಆಗ್ತೀನಿ. ಇದುಕಾದುಕೂತಕುಳಿತವರಪಟ್ಟುಅಲ್ಲ. ನಮ್ಮದು JCB ಪಕ್ಷ, ಮತ್ತು ಯಾರೇ ಸರ್ವೇ ಮಾಡಿದ್ರೂ ಅಧಿಕಾರಕ್ಕೆ ಬರೋದು ನಮಗೆ, JCB ಪಕ್ಷವೇ”ಎಂದು ಸ್ಫೋಟಕವಾಗಿ ತಿಳಿಸಿದ್ದಾರೆ.
ಈ ಘೋಷಣೆ ಮತ್ತು ದೆಹಲಿ ಟೂರ್ ಬಗ್ಗೆ ಯತ್ನಾಳ್ ನಿಖರ ಹೇಳಿಕೆ ರಾಜಕೀಯ ವಲಯದಲ್ಲಿ ಗಮನ ಸೆಳೆಯುತ್ತಿದೆ . ಪಕ್ಷದ ಸ್ವತಂತ್ರ ತಾತ್ಪರ್ಯ ಮತ್ತು 2028ಕ್ಕೆ ಸ್ವಂತ ಮುಖ್ಯಮಂತ್ರಿ ಸ್ಥಾನ ಪಡೆಯುವ ಕನಸನ್ನು ಅವರು ಖಚಿತಪಡಿಸಿದ್ದಾರೆ.
