Ashwaveega News 24×7 ಮಾರ್ಚ್ 10 – 2026 : ನಟ Darshan Thoogudeepa ಅವರ ಬೆಂಬಲಕ್ಕೆ ಕನ್ನಡ ಸಂಘಟನೆಗಳು ಬೀದಿಗಿಳಿಯಲು ಸಿದ್ಧವಾಗಿವೆ. Freedom Park ನಲ್ಲಿ ಪ್ರತಿಭಟನೆ ನಡೆಸಲು ಕನ್ನಡ ಪರ ಸಂಘಟನೆಗಳು ತೀರ್ಮಾನಿಸಿವೆ.
ಕೊಲೆ ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಿ ಪ್ರಕರಣದ ತನಿಖಾಧಿಕಾರಿ ವಿರುದ್ಧವೇ ಹೋರಾಟ ನಡೆಸುವುದಾಗಿ ಸಂಘಟನೆಗಳು ಘೋಷಿಸಿವೆ. ಈ ಸಂಬಂಧ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗುತ್ತಿದೆ.
ಪ್ರತಿಭಟನೆಗೆ ಪೊಲೀಸರು ಅನುಮತಿ ನೀಡುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಖಾಕಿ ಅನುಮತಿ ಕೊಟ್ಟರೂ ಕೊಡದಿದ್ದರೂ ಹೋರಾಟ ನಡೆಸುವುದು ನಿಶ್ಚಿತ ಎಂದು ಕನ್ನಡ ಪರ ಹೋರಾಟಗಾರ Nataraj Bommasandra ತಿಳಿಸಿದ್ದಾರೆ.
ಆರೋಪಿಗಳ ಮೊಬೈಲ್ ಫೋನ್ಗಳನ್ನು ಬೇರೆಡೆ ಸೀಜ್ ಮಾಡಿದ್ದರೂ ಠಾಣೆಯಲ್ಲಿ ಸೀಜ್ ಮಾಡಿದ್ದೇವೆ ಎಂದು ಪೊಲೀಸರು ಹೇಳುತ್ತಿದ್ದಾರೆ ಎಂದು ಸಂಘಟನೆಗಳು ಆರೋಪಿಸಿವೆ . ಮೊಬೈಲ್ ಸೀಜ್ ಮಾಡಿದ ಫೋಟೋ ಹಾಗೂ ಠಾಣೆಯ ಫ್ಲೋರಿಂಗ್ ನಡುವೆ ಮಿಸ್ಮ್ಯಾಚ್ ಇದೆ ಎಂಬ ಆರೋಪವೂ ಕೇಳಿಬರುತ್ತಿದೆ.
ಪ್ರತಿಭಟನೆಯ ಭಾಗವಾಗಿ Kanishka Hotel ಸಮೀಪದ ಪಾರ್ಕ್ನಿಂದ Freedom Park ವರೆಗೆ ಜಾಥಾ ನಡೆಸಲು ಯೋಜಿಸಲಾಗಿದೆ. ಗಾಂಧಿನಗರದ ಕನಿಷ್ಕ ಹೋಟೆಲ್ ಮುಂಭಾಗದ ಪಾರ್ಕ್ನಲ್ಲಿ ಸೇರಿ ಪ್ರತಿಭಟನೆಗೆ ಭಾಗವಹಿಸುವಂತೆ ಅಭಿಮಾನಿಗಳಿಗೆ ಕರೆ ನೀಡಲಾಗಿದೆ .
