Ashwaveega News 24×7 ಮಾರ್ಚ್ 10 – 2026 : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ Iran – Israel ಸಂಘರ್ಷದ ನಡುವೆಯೇ ಭಾರತದ ಪಾತ್ರದ ಬಗ್ಗೆ ಮಹತ್ವದ ಹೇಳಿಕೆ ಹೊರಬಂದಿದೆ . ಭಾರತದಲ್ಲಿನ United Arab Emirates (UAE) ರಾಯಭಾರಿ Abdulnasser Alshaali, ಈ ಸಂಘರ್ಷವನ್ನು ಭಾರತ ಮಧ್ಯಸ್ಥಿಕೆ ಮೂಲಕ ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ .
ಭಾರತದ ಪ್ರಧಾನಿ Narendra Modi ಒಂದು ಫೋನ್ ಕರೆ ಮಾಡಿದರೂ ಯುದ್ಧ ನಿಲ್ಲಿಸುವ ಪ್ರಯತ್ನ ಸಾಧ್ಯವಿದೆ. ಕೊಲ್ಲಿ ರಾಷ್ಟ್ರಗಳ ನಾಯಕರಲ್ಲಷ್ಟೇ ಅಲ್ಲದೆ ವ್ಯಾಪಾರ ಸಮುದಾಯಗಳಲ್ಲೂ ಮೋದಿಗೆ ಸಾಕಷ್ಟು ಗೌರವವಿದೆ ಎಂದು ಅವರು ತಿಳಿಸಿದ್ದಾರೆ .
ಇದಕ್ಕೂ ಮುನ್ನ ಕೆಲ ವರದಿಗಳಲ್ಲಿ ಯುದ್ಧದ ಸಂದರ್ಭದಲ್ಲಿ UAE ಹೆಸರು ಪ್ರಸ್ತಾಪವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ರಾಯಭಾರಿ, ಈ ಸಂಘರ್ಷದಲ್ಲಿ ನಮ್ಮನ್ನು ಏಕೆ ಮಧ್ಯೆ ತರಲಾಗುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದಿದ್ದಾರೆ. ಈ ಸಮರದಲ್ಲಿ UAE ಭಾಗಿಯಾಗಲು ಯಾವುದೇ ಕಾರಣವಿಲ್ಲ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.
ಮೋದಿ ಅವರಿಗೆ ಇರಾನ್ ಮತ್ತು ಇಸ್ರೇಲ್ ಎರಡೂ ದೇಶಗಳ ನಾಯಕರೊಂದಿಗೆ ಉತ್ತಮ ಸಂಪರ್ಕವಿದೆ . ಆದ್ದರಿಂದ ಯುದ್ಧ ಮಾಡುತ್ತಿರುವ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವಲ್ಲಿ ಅವರು ಪಾತ್ರವಹಿಸಬಹುದು .
ಒಟ್ಟಿನಲ್ಲಿ , ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಭಾರತ ಮಧ್ಯಸ್ಥಿಕೆ ವಹಿಸುವ ಸಾಧ್ಯತೆಗಳ ಬಗ್ಗೆ ಈ ಹೇಳಿಕೆ ರಾಜಕೀಯ ಮತ್ತು ರಾಜತಾಂತ್ರಿಕ ವಲಯದಲ್ಲಿ ಗಮನ ಸೆಳೆದಿದೆ.
