Ashwaveega News 24×7 ಮಾರ್ಚ್ 10 – 2026 : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ Gulf countries ಯುದ್ಧದ ಪರಿಣಾಮಗಳು ಭಾರತಕ್ಕೂ ತಟ್ಟುತ್ತಿವೆ. LPG ಕೊರತೆ ತೀವ್ರವಾಗಿರುವ ಸಂದರ್ಭದಲ್ಲಿ ಅಡುಗೆ ಎಣ್ಣೆಯ ಬೆಲೆಗಳಲ್ಲಿಯೂ ಗಣನೀಯ ಏರಿಕೆ ಕಂಡುಬರುತ್ತಿದೆ .
ಸನ್ಫ್ಲವರ್ ಆಯಿಲ್, ಪಾಮ್ ಆಯಿಲ್ ಮುಂತಾದ ಪ್ರಮುಖ ಅಡುಗೆ ಎಣ್ಣೆಗಳ ಬೆಲೆ ಇಂದು ಜಂಪ್ ಆಗಿದ್ದು, ಒಂದು ಲೀಟರ್ ಎಣ್ಣೆಯ ದರ ಕನಿಷ್ಠ 15 ರಿಂದ 20 ರೂ. ಹೆಚ್ಚಳ ಕಂಡಿದೆ. ನಿನ್ನೆ ಆರಂಭವಾದ ಬೆಲೆ ಏರಿಕೆಯು ಕೈಗೆ ತಲುಪುವುದಿಲ್ಲದ ಮಟ್ಟದ ಬೆಲೆ ಶಾಕ್ ಸೃಷ್ಟಿಸಿದೆ .
ಈ ಬೆಲೆ ಏರಿಕೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು , ಚೈನ್ ಲಿಂಕ್ ತರಹ ಅಗತ್ಯ ವಸ್ತುಗಳ ದರ ಹೆಚ್ಚುತ್ತಿದೆ. ಇಂಪೋರ್ಟ್- ಎಕ್ಸ್ಪೋರ್ಟ್ ತೊಂದರೆಗಳು, ದಿನಬಳಕೆ ವಸ್ತುಗಳ ದುಬಾರಿ ಸ್ಥಿತಿ ಮತ್ತಷ್ಟು ಒತ್ತಡ ಸೃಷ್ಟಿಸುತ್ತಿವೆ.
ಅಡುಗೆ ತೈಲದ ಬೆಲೆ ಏರಿಕೆ ಹೀಗೇ ಮುಂದುವರೆದರೆ, ಮತ್ತು ಕೊಲ್ಲಿ ರಾಷ್ಟ್ರಗಳ ಯುದ್ಧ ಮುಂದುವರೆದರೆ, ಮತ್ತಷ್ಟು ಬೆಲೆ ಏರಿಕೆ ಫಿಕ್ಸ್ ಎಂದು ವಾಣಿಜ್ಯ ವಲಯದಲ್ಲಿ ಭೀತಿ ವ್ಯಕ್ತವಾಗಿದೆ. ಇಂಥ ಪರಿಸ್ಥಿತಿ ಸಾಮಾನ್ಯ ಮನೆಮಾಲೀಕರು ಹಾಗೂ ಹೋಟೆಲ್, ರೆಸ್ಟೋರೆಂಟ್ ಉದ್ಯಮಗಳಿಗೆ ಕೂಡ ತೀವ್ರ ಆತಂಕವನ್ನು ಉಂಟುಮಾಡುತ್ತಿದೆ .
