Ashwaveega News 24×7 ಮಾರ್ಚ್ 10 – 2026 : ಬೆಂಗಳೂರು : ದೇಶಾದ್ಯಂತ ಗ್ಯಾಸ್ ಸಿಲಿಂಡರ್ ಸಮಸ್ಯೆ ತೀವ್ರವಾಗುತ್ತಿರುವ ಸಂದರ್ಭದಲ್ಲಿ, ಪ್ರಧಾನಿ ನರೆಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ತೈಲಬಿಕ್ಕಟ್ಟಿನ ಪರಿಹಾರಕ್ಕಾಗಿ ತುರ್ತು ಸಭೆ ನಡೆಸಿದೆ. ಸಂಸತ್ ಭವನದಲ್ಲಿ ನಡೆದ ಈ ಸಭೆಗೆ ಹರ್ದೀಪ್ ಸಿಂಗ್ ಪುರಿ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಸೇರಿದಂತೆ ಮುಖ್ಯ ಅಧಿಕಾರಿಗಳು ಭಾಗಿಯಾಗಿದ್ದರು.
ಸಂಸಭೆಯಲ್ಲಿ ದೇಶಾದ್ಯಂತ ಎದುರಾಗುತ್ತಿರುವ ಗ್ಯಾಸ್ ಸಿಲಿಂಡರ್ ಸಮಸ್ಯೆ ಮತ್ತು ಕಮರ್ಷಿಯಲ್ ಸಿಲಿಂಡರ್ ಪೂರೈಕೆಯಲ್ಲಿನ ಸ್ಥಗಿತದ ಬಗ್ಗೆ ಚರ್ಚೆ ನಡೆಸಲಾಗಿದೆ. ಸಿಲಿಂಡರ್ ಬುಕ್ಕಿಂಗ್ ಟೈಮ್ಲೈನ್ ಹೆಚ್ಚಿರುವ ಬಗ್ಗೆ ಮತ್ತು ಸಾರ್ವಜನಿಕರಿಗೆ ತೈಲ ಪೂರೈಕೆಯನ್ನು ಸುಗಮಗೊಳಿಸಲು ತೆಗೆದುಕೊಳ್ಳಬಹುದಾದ ಕ್ರಮಗಳನ್ನು ಕುರಿತು ಸಮಗ್ರವಾಗಿ ಪರಿಶೀಲಿಸಲಾಗಿದೆ .
ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರಧಾನಿಗೆ ಪ್ರಸ್ತುತ ದೇಶದಲ್ಲಿ ಇರುವ ತೈಲ ಸ್ಟಾಕ್ ಪ್ರಮಾಣ, ಅವುಗಳು ಎಷ್ಟು ದಿನಗಳವರೆಗೆ ಬಳಸಬಹುದೆಂಬ ಮಾಹಿತಿ ನೀಡಿದರು. ಜೊತೆಗೆ ದೇಶಕ್ಕೆ ಕಚ್ಚಾ ತೈಲ ಎಲ್ಲಿ ಎಲ್ಲಿಂದ ಬರುತ್ತಿದೆ ಎಂಬ ಮಾಹಿತಿ ನೀಡುವ ಮೂಲಕ, ತೈಲ ಬಿಕ್ಕಟ್ಟಿನ ತೀವ್ರತೆಯನ್ನು ಪ್ರಧಾನಿಗೆ ವಿವರಿಸಿದರು.
ಮಧ್ಯಪ್ರಾಚ್ಯದ ಯುದ್ಧದ ಪರಿಣಾಮದಿಂದ ಉಂಟಾದ ಬಿಕ್ಕಟ್ಟಿನ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ್ ಮಾಹಿತಿ ನೀಡಿದರು. ಸಭೆಯಲ್ಲಿ ಪರ್ಯಾಯ ವ್ಯವಸ್ಥೆಗಳ ಬಗ್ಗೆ, ತೈಲ ಪೂರೈಕೆಯನ್ನು ನಿರಂತರವಾಗಿಸಿಕೊಳ್ಳಲು ಹಾಗೂ ತೈಲಬಿಕ್ಕಟ್ಟನ್ನು ತಡೆಹಿಡಿಯಲು ಪ್ರಧಾನಿ ಮೋದಿ ಚರ್ಚೆ ನಡೆಸಿದರು.
