Ashwaveega News 24×7 ಮಾರ್ಚ್ 12 – 2026 : ನವದೆಹಲಿ: ಗ್ಯಾಸ್ ಕೊರತೆ ಮತ್ತು ಇಂಧನ ಸಮಸ್ಯೆ ಬಗ್ಗೆ ದೇಶದ ಜನರು ಪ್ಯಾನಿಕ್ ಆಗಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿರುವುದನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ .
ಸಂಸತ್ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಜನರಿಗೆ ಗಾಬರಿ ಬೇಡ ಎಂದು ಹೇಳುತ್ತಿದ್ದರೂ, ಅವರು ತಾವೇ ಹಲವು ವಿಷಯಗಳಿಂದ ಒತ್ತಡದಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು .
ಅದಾನಿ ಸಂಬಂಧಿತ ಪ್ರಕರಣಗಳು ಹಾಗೂ ಎಪ್ಸ್ಟಿನ್ ಫೈಲ್ಗಳ ವಿಚಾರದಿಂದಲೇ ಪ್ರಧಾನಿ ಮೋದಿ ಆತಂಕದಲ್ಲಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಇದೇ ಕಾರಣದಿಂದ ಅವರು ಸಂಸತ್ ಕಲಾಪಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು .
“ದೇಶದ ಜನರಿಗೆ ಪ್ಯಾನಿಕ್ ಆಗಬೇಡಿ ಎಂದು ಹೇಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಅವರೇ ಪ್ಯಾನಿಕ್ ಆಗಿದ್ದಾರೆ,” ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದರು .
ಈ ಹೇಳಿಕೆಯಿಂದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ಮತ್ತೊಮ್ಮೆ ವಾಗ್ವಾದ ತೀವ್ರವಾಗುವ ಸಾಧ್ಯತೆ ಕಂಡುಬರುತ್ತಿದೆ .
