Ashwaveega News 24×7 ಮಾರ್ಚ್ 13 – 2026 : ಕುಂಭಮೇಳದ ವೇಳೆ ವೈರಲ್ ಆಗಿದ್ದ ‘ಮೊನಾಲಿಸಾ’ ಎಂಬ ಯುವತಿಯ ಮದುವೆ ವಿಚಾರ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ . ಮುಸ್ಲಿಂ ಯುವಕನೊಂದಿಗೆ ಆಕೆ ಮದುವೆಯಾಗಿರುವ ಹಿನ್ನೆಲೆ ಬಾಲಿವುಡ್ ನಿರ್ಮಾಪಕ ಸನೋಜ್ ಮಿಶ್ರಾ ‘ಲವ್ ಜಿಹಾದ್’ ಆರೋಪ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ .
ಮೊನಾಲಿಸಾ ಅಭಿನಯಿಸಬೇಕಿದ್ದ ‘ದಿ ಡೈರಿ ಆಫ್ ಮಣಿಪುರ’ ಸಿನಿಮಾವನ್ನು ನಿರ್ಮಿಸುತ್ತಿದ್ದ ಸನೋಜ್ ಮಿಶ್ರಾ, ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಮೊನಾಲಿಸಾ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಅವರು, ಆಕೆಯ ನಡೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ .
“ಆ ಹುಡುಗಿಯನ್ನು ನಾನು ಗಂಗೆಯ ಮಗಳೆಂದು ಭಾವಿಸಿದ್ದೆ. ಆಕೆಗೆ ಸಹಾಯ ಮಾಡಲು ನಾನು 10 ಕೋಟಿ ರೂಪಾಯಿ ಸಾಲ ಪಡೆದು ಜೈಲಿಗೂ ಹೋಗಿದ್ದೆ. ಆದರೆ ಈಗ ಆಕೆ ಒಬ್ಬ ಮುಸ್ಲಿಂ ಯುವಕನ ಜೊತೆ ಓಡಿಹೋಗಿದ್ದಾಳೆ. ಈ ಮೂಲಕ ಎಲ್ಲವನ್ನೂ ನಾಶಮಾಡಿದ್ದಾಳೆ,” ಎಂದು ಸನೋಜ್ ಮಿಶ್ರಾ ಆರೋಪಿಸಿದ್ದಾರೆ.
ಇದೇ ವೇಳೆ, “ಇದು ಪ್ರೀತಿಯ ಹೋರಾಟ ಅಲ್ಲ, ಇದು ಲವ್ ಜಿಹಾದ್. ಮೊನಾಲಿಸಾಗೆ ತಾನು ಪ್ರೀತಿ ಗೆದ್ದಿದ್ದೀನಿ ಎಂದು ಅನಿಸಿರಬಹುದು. ಆದರೆ ವಾಸ್ತವದಲ್ಲಿ ಆಕೆ ಈಗಾಗಲೇ ಲವ್ ಜಿಹಾದ್ಗೆ ಬಲಿಯಾಗಿದ್ದಾಳೆ,” ಎಂದು ಅವರು ಹೇಳಿದ್ದಾರೆ.
ಮೊನಾಲಿಸಾ ಮದುವೆಗೆ ಆಕೆಯ ಮ್ಯಾನೇಜರ್ ಮತ್ತು ಬ್ರೋಕರ್ ಸಹಕಾರ ನೀಡಿದ್ದಾರೆ ಎಂಬ ಗಂಭೀರ ಆರೋಪವನ್ನೂ ಸನೋಜ್ ಮಿಶ್ರಾ ಮಾಡಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಮೊನಾಲಿಸಾ ಮದುವೆ ವಿಚಾರ ಮತ್ತೆ ವಿವಾದದ ಕೇಂದ್ರಬಿಂದುವಾಗಿದೆ.
