Ashwaveega News 24×7 ಮಾರ್ಚ್ 13– 2026 : ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ಮತ್ತೊಂದು ಬೆಲೆಬರೆ ಬಿದ್ದಿದೆ. ಈಗ ಒಂದೊತ್ತಿನ ಊಟಕ್ಕೂ ಹೆಚ್ಚುವರಿ ಹಣ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ. ನಗರದ ಬಹುತೇಕ ಹೋಟೆಲ್ಗಳಲ್ಲಿ ತಿಂಡಿ ಮತ್ತು ಊಟದ ದರ ಏರಿಕೆಯಾಗಿದೆ. ಗ್ಯಾಸ್ ಅಭಾವ ಮತ್ತು ವೆಚ್ಚ ಹೆಚ್ಚಳವನ್ನು ಕಾರಣವನ್ನಾಗಿ ಹೇಳಿಕೊಂಡು ಹಲವಾರು ಹೋಟೆಲ್ ಮಾಲೀಕರು ದರ ಹೆಚ್ಚಳ ಮಾಡಿದ್ದಾರೆ.
ಕೆಲವೆಡೆ ಗ್ಯಾಸ್ ವೆಚ್ಚ ಹೆಚ್ಚಾಗಿದೆ ಎಂಬ ನೆಪದಲ್ಲಿ ಹೆಚ್ಚುವರಿ ಹಣವನ್ನು ಕೂಡ ಗ್ರಾಹಕರಿಂದ ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಏಕಾಏಕಿ ದರ ಏರಿಕೆಯ ಕಾರಣದಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.
ಸದ್ಯ ನಗರದಲ್ಲಿನ ಅನೇಕ ಹೋಟೆಲ್ಗಳಲ್ಲಿ ತಿಂಡಿ ಬೆಲೆ ಹೆಚ್ಚಿಸಿರುವುದಾಗಿ ಸೂಚಿಸುವ ಬೋರ್ಡ್ಗಳನ್ನು ಹಾಕಲಾಗಿದೆ. ಇದರಿಂದ ಹೋಟೆಲ್ ನಂಬಿಕೊಂಡು ಊಟಕ್ಕೆ ಹೋಗುವ ಜನರಿಗೆ ಶಾಕ್ ಎದುರಾಗಿದೆ.
ಬೆಲೆ ಏರಿಕೆಯ ಹಿನ್ನೆಲೆ ಗ್ರಾಹಕರಲ್ಲಿ ಅಸಮಾಧಾನವೂ ವ್ಯಕ್ತವಾಗುತ್ತಿದೆ. ಈಗಾಗಲೇ ದೈನಂದಿನ ಖರ್ಚುಗಳು ಹೆಚ್ಚಿರುವ ನಡುವೆ ಹೋಟೆಲ್ ತಿಂಡಿ ಬೆಲೆ ಏರಿಕೆ ಸಾಮಾನ್ಯ ಜನರಿಗೆ ಮತ್ತೊಂದು ಹೊರೆ ಆಗಿದೆ.
