Ashwaveega News 24×7 ಮಾರ್ಚ್ 13– 2026 : ಅಂತರರಾಷ್ಟ್ರೀಯ ಬೆಳವಣಿಗೆಗಳ ನಡುವೆಯೇ ಬಂಗಾರ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಕಂಡುಬಂದಿದ್ದು, ಖರೀದಿದಾರರಿಗೆ ಸ್ವಲ್ಪ ಮಟ್ಟಿನ ನೆಮ್ಮದಿ ನೀಡಿದೆ. ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿ ಮತ್ತು ಜಾಗತಿಕ ಮಾರುಕಟ್ಟೆಯ ಅಸ್ಥಿರತೆಯ ಪರಿಣಾಮವಾಗಿ ಚಿನ್ನ–ಬೆಳ್ಳಿ ದರದಲ್ಲಿ ಬದಲಾವಣೆ ಕಂಡುಬರುತ್ತಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ 10 ಗ್ರಾಂ ಬಂಗಾರದ ಬೆಲೆ ಸುಮಾರು 1 ಲಕ್ಷ 63 ಸಾವಿರ ರೂಪಾಯಿಯಷ್ಟಿದೆ. ಕಳೆದ ಎರಡು ದಿನಗಳಿಂದ ಚಿನ್ನದ ದರದಲ್ಲಿ ಹೆಚ್ಚಿನ ಏರಿಳಿತ ಕಂಡುಬರದೇ ಯಥಾಸ್ಥಿತಿಯಲ್ಲೇ ವ್ಯವಹಾರ ನಡೆಯುತ್ತಿದೆ.
ಇನ್ನೊಂದೆಡೆ ಬೆಳ್ಳಿ ದರದಲ್ಲಿ ದಿಢೀರ್ ಇಳಿಕೆ ಕಂಡುಬಂದಿದೆ . ಒಂದು ಕೆಜಿ ಬೆಳ್ಳಿಯ ಬೆಲೆ ಸುಮಾರು 2 ಲಕ್ಷ 69 ಸಾವಿರ ರೂಪಾಯಿಯಷ್ಟಿದ್ದು, ಕಳೆದ ಕೆಲವು ದಿನಗಳಿಂದ ದರ ಕ್ರಮೇಣ ಇಳಿಕೆಯಾಗುತ್ತಿದೆ.
ಡಾಲರ್ನಲ್ಲಿ ಹೂಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆಗೆ ಸ್ವಲ್ಪ ಮಟ್ಟಿನ ಪರಿಣಾಮ ಬಿದ್ದಿದೆ .
ಒಟ್ಟಾರೆ ಚಿನ್ನ–ಬೆಳ್ಳಿ ದರ ಇಳಿಕೆಯಿಂದ ಖರೀದಿದಾರರಿಗೆ ಇದು ಒಳ್ಳೆಯ ಸುದ್ದಿ ಆಗಿದ್ದರೆ, ಹೆಚ್ಚಿನ ದರದಲ್ಲಿ ಹೂಡಿಕೆ ಮಾಡಿದ ಹೂಡಿಕೆದಾರರಿಗೆ ಇದು ಸ್ವಲ್ಪ ಮಟ್ಟಿನ ಶಾಕ್ ತಂದಿದೆ.
