Ashwaveega News 24×7 ಮಾರ್ಚ್ 14– 2026 : ಗ್ಯಾಸ್ ಕೊರತೆಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಇಂದಿರಾ ಕ್ಯಾಂಟೀನ್ಗಳು ಮತ್ತೆ ಆರಂಭವಾಗಿವೆ. ನಿನ್ನೆ ತಡರಾತ್ರಿ ಇಂದಿರಾ ಕಿಚನ್ಗಳಿಗೆ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡಲಾಗಿದ್ದು, ಇದರಿಂದ ಸೇವೆ ಪುನರಾರಂಭವಾಗಿದೆ .
ಪ್ರತಿ ಇಂದಿರಾ ಕಿಚನ್ಗೆ ಸುಮಾರು 15 ಗ್ಯಾಸ್ ಸಿಲಿಂಡರ್ಗಳನ್ನು ಪೂರೈಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್ನಿಂದ ಗ್ಯಾಸ್ ಸರಬರಾಜು ಮಾಡಲಾಗಿದೆ .
ಗುತ್ತಿಗೆ ಪಡೆದ ಕಂಪೆನಿಗಳ ಮನವಿ ಮೇರೆಗೆ ಜಿಬಿಎ ಮತ್ತು ಇಂಡಿಯನ್ ಆಯಿಲ್ ಕಾರ್ಪೋರೇಷನ್ ನಡುವೆ ಸಭೆ ನಡೆದಿತ್ತು. ಈ ಸಭೆಯಲ್ಲಿ ಇಂದಿರಾ ಕ್ಯಾಂಟೀನ್ಗಳಿಗೆ ಗ್ಯಾಸ್ ಪೂರೈಕೆ ಮಾಡುವುದಾಗಿ ಒಪ್ಪಂದಕ್ಕೆ ಬರಲಾಗಿದೆ .
ಸಭೆಯ ಬಳಿಕ ತಕ್ಷಣ ಕ್ರಮ ಕೈಗೊಂಡು ನಿನ್ನೆ ತಡರಾತ್ರಿ ಸಿಲಿಂಡರ್ಗಳನ್ನು ಇಂದಿರಾ ಕಿಚನ್ಗಳಿಗೆ ತಲುಪಿಸಲಾಗಿದೆ. ಇದರಿಂದ ಇಂದಿರಾ ಕ್ಯಾಂಟೀನ್ಗಳು ಮತ್ತೆ ಎಂದಿನಂತೆ ಕಾರ್ಯಾಚರಣೆ ಆರಂಭಿಸಿವೆ. ಇದರಿಂದ ಕಡಿಮೆ ದರದಲ್ಲಿ ಆಹಾರ ಪಡೆಯುತ್ತಿದ್ದ ಸಾವಿರಾರು ಜನರಿಗೆ ಮತ್ತೆ ಸೌಲಭ್ಯ ಲಭ್ಯವಾಗಿದೆ .
