Ashwaveega News 24×7 ಮಾರ್ಚ್ 15 – 2026 : ನವದೆಹಲಿ : ದೇಶದಲ್ಲಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಕೊರತೆ ಇಲ್ಲ ಎಂದು ಪೆಟ್ರೋಲಿಯಂ ಮತ್ತು ಪ್ರಕೃತಿ ಅನಿಲ ಸಚಿವಾಲಯದ ಜಂಟಿ ಕಾರ್ಯ ದರ್ಶಿ Sujata Sharma ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು , “ಭಾರತದಲ್ಲಿ ಈವರೆಗೂ ಎಲ್ಲಿಯೂ ಗ್ಯಾಸ್ ಸಿಲಿಂಡರ್ ಕೊರತೆ ಉಂಟಾಗಿಲ್ಲ. ಜನರು ಭಯಪಡುವ ಅಗತ್ಯವಿಲ್ಲ,” ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಆತಂಕದಿಂದ ಗ್ಯಾಸ್ ಬುಕ್ಕಿಂಗ್ ಪ್ರಕರಣಗಳು ಹೆಚ್ಚಾಗಿರುವುದಾಗಿ ಅವರು ತಿಳಿಸಿದರು. “ಮೊದಲು ದಿನಕ್ಕೆ ಸುಮಾರು 7.5 ರಿಂದ 7.6 ಮಿಲಿಯನ್ ಬುಕ್ಕಿಂಗ್ ಆಗುತ್ತಿತ್ತು. ಆದರೆ ಈಗ ಅದು ಸುಮಾರು 8.8 ಮಿಲಿಯನ್ಗೆ ಏರಿಕೆಯಾಗಿದೆ,” ಎಂದು ಹೇಳಿದ್ದಾರೆ.
ಅವರು ಜನರಿಗೆ ಮನವಿ ಮಾಡುತ್ತಾ, “ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಗ್ಯಾಸ್ ಸಿಲಿಂಡರ್ಗಾಗಿ ಮುಗಿ ಬೀಳಬೇಡಿ. ವಿತರಕರನ್ನು ಖುದ್ದಾಗಿ ಭೇಟಿ ಮಾಡುವ ಅಗತ್ಯವೂ ಇಲ್ಲ,” ಎಂದು ಹೇಳಿದರು.
ಡಿಜಿಟಲ್ ಮೂಲಕವೇ ಸಿಲಿಂಡರ್ ಬುಕ್ಕಿಂಗ್ ಮಾಡುವಂತೆ ಅವರು ಸಲಹೆ ನೀಡಿದರು. ಕಂಪನಿಗಳೇ ಸಿಲಿಂಡರ್ಗಳನ್ನು ಮನೆಗಳಿಗೆ ತಲುಪಿಸುತ್ತಿದ್ದು, ಮೊದಲಿನಂತೆಯೇ ಸರಬರಾಜು ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದರು.
“ಗ್ಯಾಸ್ ಸಿಲಿಂಡರ್ಗಳಿಗಾಗಿ ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ,” ಎಂದು ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಪುನರುಚ್ಚರಿಸಿದರು.
