Ashwaveega News 24×7 ಮಾರ್ಚ್ 17 – 2026 : Marriage Party ಚಿತ್ರದ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸದ್ದುಗದ್ದಲವಿಲ್ಲದೆ ನಡೆದ ಈ ಶೂಟಿಂಗ್ ಈಗ ಚಿತ್ರತಂಡವನ್ನು ಎರಡನೇ ಹಂತದ ಚಿತ್ರೀಕರಣದತ್ತ ಕರೆದೊಯ್ದಿದೆ.
Chayan Shetty ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ, ಸಂಪೂರ್ಣ ಹಾಸ್ಯಪ್ರಧಾನ ಕಥಾಹಂದರ ಹೊಂದಿದೆ. ಈ ಹಿಂದೆ Roopesh Shetty ಅಭಿನಯದ ‘ಅಧಿಪತ್ರ’ ಚಿತ್ರದ ಮೂಲಕ ಗಮನ ಸೆಳೆದಿದ್ದ ಚಯನ್ ಶೆಟ್ಟಿ, ಇದೀಗ ಮತ್ತೊಂದು ಮನರಂಜನಾತ್ಮಕ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಚಿತ್ರದಲ್ಲಿ Vineeth Kumar ನಾಯಕನಾಗಿ ಅಭಿನಯಿಸುತ್ತಿದ್ದು, ತುಳು ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದಿರುವ ಅವರು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಪ್ರವೇಶಿಸುತ್ತಿದ್ದಾರೆ. ಕುಂದಾಪುರದ ಸುತ್ತಮುತ್ತ ನಡೆಯುವ ಕಥೆಯನ್ನು ಒಳಗೊಂಡಿರುವ ಈ ಚಿತ್ರ, ಗ್ರಾಮೀಣ ಹಿನ್ನೆಲೆಯಲ್ಲಿಯೇ ನಗುವಿನ ರಸದೌತಣ ನೀಡಲಿದೆ.
ಕುಂದಾಪುರದ ವಿವಿಧ ಸ್ಥಳಗಳಲ್ಲಿ ಸುಮಾರು 20 ದಿನಗಳ ಕಾಲ ನಡೆದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದ್ದು, ಮುಂದಿನ ಹಂತದ ಶೂಟಿಂಗ್ ಕಾರ್ಯಗಳು ಪ್ರಗತಿಯಲ್ಲಿವೆ.
ವರಾಹಿ ಫಿಲಂಸ್ ಬ್ಯಾನರ್ ಅಡಿಯಲ್ಲಿ Santhosh V ನಿರ್ಮಾಣ ಮಾಡುತ್ತಿರುವ ಈ ಚಿತ್ರ, ಅವರ ನಿರ್ಮಾಪಕ ಜೀವನದ ಮೊದಲ ಹೆಜ್ಜೆಯಾಗಿದೆ.

ಚಿತ್ರಕ್ಕೆ Srikanth ಛಾಯಾಗ್ರಹಣ, Rithvik Muralidhar ಸಂಗೀತ, Nithin Shetty ಸಂಕಲನ ಒದಗಿಸಿದ್ದಾರೆ. Pramod Maravanthe ಮತ್ತು Trilok ಸಾಹಿತ್ಯ ರಚಿಸಿದ್ದಾರೆ.
ತಾರಾಗಣದಲ್ಲಿ Prakash Tuminadu, Deepak Rai, Naveen D Padil, Rakshitha, Namitha Kiran ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿದ್ದಾರೆ.
ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಮೂಡಿ ಬರುತ್ತಿರುವ ‘ಮ್ಯಾರೇಜ್ ಪಾರ್ಟಿ’ ಸಿನಿಮಾ, ನಗುವಿನ ಜೊತೆಗೂ ಗ್ರಾಮೀಣ ಬದುಕಿನ ಸೊಗಡನ್ನು ತೆರೆದಿಡುವ ಭರವಸೆ ಮೂಡಿಸಿದೆ.
