Ashwaveega News 24×7 ಮಾರ್ಚ್ 17 – 2026 : ಬೆಳಗಾವಿ : ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಕದನದ ಪರಿಣಾಮ ಕುಂದಾನಗರಿ ಬೆಳಗಾವಿಯಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್ಗಳ ಕೊರತೆ ತೀವ್ರಗೊಂಡಿದೆ. ನಗರದಲ್ಲೂ ಹಾಗೂ ಅಥಣಿಯಲ್ಲೂ ಗ್ಯಾಸ್ ಏಜೆನ್ಸಿಗಳ ಮುಂದೆ ಜನರು ದೀರ್ಘ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬರುತ್ತಿದೆ.
ಸಿಲಿಂಡರ್ ಪಡೆಯಲು ಸಾರ್ವಜನಿಕರು ಮುಗಿಬಿದ್ದು, ಏಜೆನ್ಸಿಗಳು ತೆರೆಯುವ ಮೊದಲುಲೇ ಕ್ಯೂನಲ್ಲಿ ನಿಲ್ಲುತ್ತಿದ್ದಾರೆ. ಕಳೆದ 10 ದಿನಗಳಿಂದ ಸಿಲಿಂಡರ್ ಸಿಗದೇ ಜನರು ಸಂಕಷ್ಟ ಅನುಭವಿಸುತ್ತಿದ್ದು, ದಿನನಿತ್ಯದ ಅಡುಗೆಗೂ ತೊಂದರೆ ಉಂಟಾಗಿದೆ .
ಅಥಣಿಯ ಗ್ಯಾಸ್ ಏಜೆನ್ಸಿಗಳ ಮುಂದೆ ಸಹ ಇದೇ ಪರಿಸ್ಥಿತಿ ಕಂಡುಬಂದಿದ್ದು, ಜನರು ಬೇಸರ ವ್ಯಕ್ತಪಡಿಸಿದ್ದಾರೆ. “ಕೇಂದ್ರ ಸರ್ಕಾರ ಗ್ಯಾಸ್ ಸಮಸ್ಯೆ ಇಲ್ಲ ಎಂದು ಹೇಳುತ್ತದೆ. ಆದರೆ ಸ್ಥಳೀಯವಾಗಿ ಸಿಲಿಂಡರ್ ಸಿಗುತ್ತಿಲ್ಲ” ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಇನ್ನೂ, ಜನಪ್ರತಿನಿಧಿಗಳ ವಿರುದ್ಧವೂ ಜನರು ಕಿಡಿಕಾರಿದ್ದಾರೆ. “ಸಂಸದರು, ಶಾಸಕರು ನಮ್ಮ ಸಮಸ್ಯೆ ಕೇಳುವುದೇ ಇಲ್ಲ. ವೋಟ್ ಬೇಕಾದಾಗ ಮಾತ್ರ ಬರುತ್ತಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ, ಕೊಲ್ಲಿ ರಾಷ್ಟ್ರಗಳ ಅಸ್ಥಿರ ಪರಿಸ್ಥಿತಿ ಸ್ಥಳೀಯ ಮಟ್ಟದಲ್ಲಿ ಪರಿಣಾಮ ಬೀರುತ್ತಿದ್ದು, ಗ್ಯಾಸ್ ಪೂರೈಕೆ ಸಮಸ್ಯೆ ತಕ್ಷಣ ಪರಿಹಾರ ಕಂಡುಕೊಳ್ಳಬೇಕೆಂಬ ಒತ್ತಡ ಹೆಚ್ಚಾಗಿದೆ.
