Ashwaveega News 24×7 ಮಾರ್ಚ್ 18– 2026 : ಕೋಲಾರ : ರಾಜ್ಯಾದ್ಯಂತ ಇಂದು SSLC ಪರೀಕ್ಷೆ ಆರಂಭವಾಗಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಸೆಂಟ್ ಜೋಸೆಫ್ ಶಾಲೆಯಲ್ಲಿ ಒಬ್ಬ ಪ್ರತಿಭಾವಂತಿ ವಿದ್ಯಾರ್ಥಿನಿ ಅಪರೂಪದ ದೃಢತೆಯ ಉದಾಹರಣೆ ತೋರಿಸಿದ್ದಾರೆ.
ಕೆಜಿಎಫ್ ತಾಲ್ಲೂಕಿನ ಚಿನ್ನಗನಹಳ್ಳಿ ನಿವಾಸಿ ಕುಸುಮ ಇತ್ತೀಚೆಗೆ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದಾಳೆ. ಸದ್ಯ ಅವರು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ತಾಯಿಯ ಜೊತೆಗೆ ಪರೀಕ್ಷೆಗೆ ಹಾಜರಾಗಲು ಬಯಸಿದ್ದಾರೆ. ಆಸ್ಪತ್ರೆಯಿಂದ ಬಿಎಇ ಒ ಅನುಮತಿ ಪಡೆದು, ಆಂಬ್ಯುಲೆನ್ಸ್ನಲ್ಲಿ ಸ್ಟ್ರೆಚರ್ ಬೆಡ್ ಮೇಲೆಯೇ ಪರೀಕ್ಷೆ ಬರೆದಿದ್ದಾರೆ.

ಈ ಘಟನೆಯು ವಿದ್ಯಾರ್ಥಿನಿಯ ದೃಢತೆ, ಕಠಿಣ ಪರಿಶ್ರಮ ಮತ್ತು ಹಾಲು ಶ್ರದ್ಧೆ ಪರಿಗಣಿಸಿದಂತೆ ಶಿಕ್ಷಕರು ಮತ್ತು ಸಹಪಾಠಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಕಷ್ಟದ ಸಂದರ್ಭದಲ್ಲಿಯೂ ಶಿಕ್ಷಣದತ್ತ ಉತ್ಸಾಹ ತೋರಿದ ಈ ಘಟನೆಯು ಎಲ್ಲರಿಗೂ ಪ್ರೇರಣೆಯಾಗಿದೆ.
