Ashwaveega News 24×7 ಮಾರ್ಚ್ 18– 2026 : ಬೆಂಗಳೂರು ನಗರದ ಹೃದಯಭಾಗದಲ್ಲಿರುವ ಎಂ. ಚಿನ್ನಸ್ವಾಮಿ ಸ್ಟೇಡಿಯಂ ಇದೀಗ ಸಂಪೂರ್ಣ ಕನ್ನಡಮಯವಾಗಿ ಮಿಂಚುತ್ತಿದೆ. ಐಪಿಎಲ್ ಪಂದ್ಯಗಳಿಗಾಗಿ ಸ್ಟೇಡಿಯಂನ್ನು ಆಧುನಿಕವಾಗಿ ಸಿದ್ಧಗೊಳಿಸಲಾಗಿದ್ದು, ಹಲವು ಹೊಸ ವ್ಯವಸ್ಥೆಗಳು ಅಳವಡಿಸಲಾಗಿದೆ.
ಸ್ಟೇಡಿಯಂ ಪ್ರವೇಶ ದ್ವಾರಗಳನ್ನು ವಿಸ್ತರಿಸಿ, ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಲಾಗಿದೆ. ಹೈ ಡೆಫಿನಿಷನ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ತುರ್ತು ಪರಿಸ್ಥಿತಿಗಳಿಗೆ ಅಲರಾಂ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದೆ.
ವಿಶೇಷವಾಗಿ ಹಳದಿ – ಕೆಂಪು ಬಣ್ಣಗಳಲ್ಲಿ ಕನ್ನಡದ ಸೊಗಡನ್ನು ಪ್ರತಿ ಬಿಂಬಿಸುವ ರೀತಿಯಲ್ಲಿ ಸ್ಟೇಡಿಯಂ ಅಲಂಕರಿಸಲಾಗಿದೆ . ಎಲ್ಲಾ ಸೂಚನಾ ಫಲಕಗಳು ಕನ್ನಡದಲ್ಲಿಯೇ ಇರಲಿದ್ದು, ಗೇಟ್ ಸಂಖ್ಯೆಗಳನ್ನೂ ಕನ್ನಡದಲ್ಲೇ ಬರೆಯಲಾಗಿದೆ .
ಸುಮಾರು 10 ತಿಂಗಳ ಬಳಿಕ ಇಲ್ಲಿ ಐಪಿಎಲ್ ಪಂದ್ಯ ನಡೆಯಲಿದ್ದು, ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗಿದೆ. ಮಾರ್ಚ್ 28ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ರೋಚಕ ಪಂದ್ಯ ನಡೆಯಲಿದೆ .
ಒಟ್ಟಾರೆ, ಕನ್ನಡದ ಸಾಂಸ್ಕೃತಿಕ ವೈಭವ ಮತ್ತು ಆಧುನಿಕ ಸೌಲಭ್ಯಗಳೊಂದಿಗೆ ಚಿನ್ನಸ್ವಾಮಿ ಸ್ಟೇಡಿಯಂ ಕ್ರಿಕೆಟ್ ಹಬ್ಬಕ್ಕೆ ಸಜ್ಜಾಗಿದೆ .
