Ashwaveega News 24×7 ಮಾರ್ಚ್ 20 – 2026 : ಬೆಂಗಳೂರು : ರಂಜಾನ್ ಹಬ್ಬದ ಸಂಭ್ರಮದ ನಡುವೆ ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮಂಗಮ್ಮನಪಾಳ್ಯದಲ್ಲಿ ನಡೆದ ಉಚಿತ ಕೋಳಿ ವಿತರಣೆ ಕಾರ್ಯಕ್ರಮ ಜನರ ಗಮನ ಸೆಳೆದಿದೆ.
ಹಬ್ಬದ ಹಿನ್ನೆಲೆ ಬಡವರು ಹಾಗೂ ಸಾರ್ವಜನಿಕರಿಗಾಗಿ ಸುಮಾರು 3,000 ಕೋಳಿಗಳನ್ನು ಉಚಿತವಾಗಿ ವಿತರಿಸಲಾಯಿತು. ಈ ಕಾರ್ಯಕ್ರಮವನ್ನು ಎಚ್.ಎಸ್.ಆರ್ ಬ್ಲಾಕ್ ಕಾಂಗ್ರೆಸ್ ಮುಖಂಡ ರಾಘವೇಂದ್ರ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆ 7 ಗಂಟೆಯಿಂದಲೇ ಜನರು ಮಂಗಮ್ಮನಪಾಳ್ಯಕ್ಕೆ ಆಗಮಿಸಲು ಆರಂಭಿಸಿದ್ದು, ಕೋಳಿ ಪಡೆಯಲು ಕಿಲೋಮೀಟರ್ ಉದ್ದದ ಸರತಿಸಾಲಿನಲ್ಲಿ ನಿಂತ ದೃಶ್ಯಗಳು ಕಂಡುಬಂದವು. ರಸ್ತೆಗಳೆಲ್ಲಾ ಜನಜಂಗುಳಿಯಿಂದ ತುಂಬಿ ತುಳುಕಿದವು.

ಯುಗಾದಿ ಹಬ್ಬದ ಮರುದಿನ ರಂಜಾನ್ ಆಚರಣೆ ಇರುವ ಹಿನ್ನೆಲೆ ಮಾಂಸಕ್ಕೆ ಭಾರೀ ಬೇಡಿಕೆ ಕಂಡುಬರುತ್ತಿದ್ದು, ಈ ಸಂದರ್ಭದಲ್ಲಿ ಉಚಿತ ಕೋಳಿ ವಿತರಣೆ ಜನರಲ್ಲಿ ಸಂತೋಷವನ್ನು ಮೂಡಿಸಿದೆ .
ಒಟ್ಟಿನಲ್ಲಿ, ಹಬ್ಬದ ಸಂಭ್ರಮದಲ್ಲಿ ನಡೆದ ಈ ಕಾರ್ಯಕ್ರಮ ಸ್ಥಳೀಯರಲ್ಲಿ ವಿಶೇಷ ಉತ್ಸಾಹಕ್ಕೆ ಕಾರಣವಾಗಿದ್ದು, ಬಡವರಿಗೆ ನೆರವಾಗುವ ಕಾರ್ಯವಾಗಿ ಮೆಚ್ಚುಗೆ ಪಡೆದಿದೆ .
