Ashwaveega News 24×7 ಮಾರ್ಚ್ 22 – 2026 : ಬೆಂಗಳೂರು: ಐಷಾರಾಮಿ ಕಾರು ಡ್ರಿಫ್ಟಿಂಗ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಹೆಸರು ಈ ಪ್ರಕರಣದಲ್ಲಿ ಕೇಳಿಬಂದಿದೆ.
ಅನಿಲ್ ಕುಂಬ್ಳೆ ಸರ್ಕಲ್ನಲ್ಲಿ ಲ್ಯಾಂಬೊರ್ಗಿನಿ ಕಾರನ್ನು ಬಳಸಿ 2-3 ಬಾರಿ ಡ್ರಿಫ್ಟಿಂಗ್ ನಡೆಸಿರುವ ಆರೋಪ ರಿಕ್ಕಿ ರೈ ವಿರುದ್ಧ ಕೇಳಿಬಂದಿದೆ. ಈ ಹಿನ್ನೆಲೆ ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು KA-05 NR-0009 ಸಂಖ್ಯೆಯ ಲ್ಯಾಂಬೊರ್ಗಿನಿ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ರಿಕ್ಕಿ ರೈ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಜೊತೆಗೆ ಕಾರಿನ ನೋಂದಣಿ ವಿವರಗಳ ಪರಿಶೀಲನೆಗಾಗಿ ಆರ್ಟಿಒಗೆ ಪೊಲೀಸರು ಪತ್ರ ಬರೆದಿದ್ದಾರೆ.
ಘಟನೆಯ ಕುರಿತು ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿರುವ ಪೊಲೀಸರು, ಕಾರು ಡ್ರಿಫ್ಟಿಂಗ್ ನಡೆದಿರುವುದನ್ನು ದೃಢಪಡಿಸಲು ಮುಂದಾಗಿದ್ದಾರೆ. ಸಾಕ್ಷ್ಯಾಧಾರಗಳ ಆಧಾರದಲ್ಲಿ ಕಾರನ್ನು ಸೀಜ್ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
