Ashwaveega News 24×7 ಮಾರ್ಚ್ 22 – 2026 : ವಾಷಿಂಗ್ಟನ್ / ತಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 48 ಗಂಟೆಗಳ ಗಡುವು ನೀಡಿ ಹಾರ್ಮುಜ್ ಜಲಸಂಧಿ ತೆರೆಯುವಂತೆ ಒತ್ತಾಯಿಸಿರುವಂತೆ, ಇರಾನ್ ತೀವ್ರ ಎಚ್ಚರಿಕೆ ನೀಡಿದೆ.
ಇರಾನ್ನ ಐಆರ್ಜಿಸಿ (IRGC) ವಕ್ತಾರ ಇಬ್ರಾಹಿಂ ಝೋಲ್ಫಾಘರಿ ಹೇಳಿಕೆಯಲ್ಲಿ, “ನಾವು ತೈಲ ಮತ್ತು ಜಲ ಸಂಸ್ಕರಣಾ ಘಟಕಗಳು, ವಿದ್ಯುತ್ ಗ್ರಿಡ್, ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯಗಳ ಮೇಲೆ ಧ್ವಂಸ ನಡೆಸುವ ಸಾಮರ್ಥ್ಯ ಹೊಂದಿದ್ದೇವೆ. ಧಮ್ಕಿ ಹಾಕಿದರೆ ನಿಮ್ಮನ್ನ ಸುಮ್ಮನೆ ಬಿಡುವುದಿಲ್ಲ” ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ, ಇರಾನ್ ತನ್ನ ಕ್ಷಿಪಣಿಗಳನ್ನು ಇಸ್ರೇಲ್ನ ಪ್ರಮುಖ ನಗರಗಳು ಹಾಗೂ ಸಂಬಂಧಿತ ಜಲ – ವಿದ್ಯುತ್ ಘಟಕಗಳ ಮೇಲೆ ಸುರಿಮಳೆಗೊಳಿಸಿರುವ ವರದಿ ಬಂದಿದೆ.
ಈ ಪರಿಸ್ಥಿತಿ ಜಾಗತಿಕ ಭದ್ರತೆ ಮತ್ತು ತೈಲ ಮಾರುಕಟ್ಟೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಅಮೆರಿಕ ಹಾಗೂ ಇಸ್ರೇಲ್ ಸಹಿತ ಮಿತ್ರ ರಾಷ್ಟ್ರಗಳು ಈ ಹಿನ್ನೆಲೆ ಅಚ್ಚಳಗೊಂಡಿರುವುದಾಗಿ ವಿದೇಶಾಂಗ ಮೂಲಗಳು ತಿಳಿಸಿವೆ.
