Ashwaveega News 24×7 ಮಾರ್ಚ್ 23 – 2026 : ಬೆಂಗಳೂರು : ನಟಿ ಭಾವನಾ ರಾಮಣ್ಣ ಅವರ ಮನೆಯಲ್ಲಿ ಮಗಳ ನಾಮಕರಣ ಸಂಭ್ರಮ ಸಡಗರದಿಂದ ನೆರವೇರಿತು. ಮುದ್ದು ಮಗಳಿಗೆ “ರುಕ್ಮಿಣಿ” ಎಂದು ಹೆಸರಿಟ್ಟಿದ್ದಾರೆ.
ತಮ್ಮ ಅಜ್ಜಿಯ ಹೆಸರನ್ನೇ ಮಗಳಿಗೆ ನಾಮಕರಣ ಮಾಡಿರುವುದಾಗಿ ಭಾವನಾ ರಾಮಣ್ಣ ತಿಳಿಸಿದ್ದಾರೆ. ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ಈ ಸಮಾರಂಭ ಸರಳವಾಗಿ ನಡೆದಿತು.
ಐವಿಎಫ್ ಚಿಕಿತ್ಸೆ ಮೂಲಕ ಮಗಳನ್ನು ಪಡೆದಿದ್ದ ಭಾವನಾ ರಾಮಣ್ಣ ಕಳೆದ ಆಗಸ್ಟ್ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರೂ, ಹೆರಿಗೆ ವೇಳೆ ಒಂದು ಮಗುವನ್ನು ಕಳೆದುಕೊಂಡಿದ್ದ ಘಟನೆ ಮನಕಲುಕುವಂತಿತ್ತು.
ಈಗ ಮಗಳ ನಾಮಕರಣ ಸಂಭ್ರಮದ ಮೂಲಕ ಕುಟುಂಬದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ.
