Ashwaveega News 24×7 ಮಾರ್ಚ್ 23 – 2026 : ಬೆಂಗಳೂರು : ಯಾವುದೇ ತಪ್ಪು ಇಲ್ಲದೆ ವಾಹನ ಅಪಘಾತದಲ್ಲಿ ಮೃತರಾದ ವ್ಯಕ್ತಿಗಳಿಗೆ ಆದಾಯ ಮಿತಿಯ ನಿರ್ಬಂಧವಿಲ್ಲದೆ ₹5 ಲಕ್ಷ ಪರಿಹಾರ ಮತ್ತು ಗಾಯಗೊಂಡವರಿಗೆ ₹2.5 ಲಕ್ಷ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಈ ನಿರ್ಧಾರವು ಮೋಟಾರು ವಾಹನ ತಿದ್ದುಪಡಿ ಕಾಯ್ದೆ, 2019 ಸೆಕ್ಷನ್ 164 ಆಧಾರಿತವಾಗಿದೆ.
ಕೇಸ್ನಲ್ಲಿ ರಸ್ತೆ ಅಡ್ಡಬಂದ ಎಮ್ಮೆಗೆ ಡಿಕ್ಕಿಹಾಕುವುದನ್ನು ತಪ್ಪಿಸಲು ಬೈಕ್ ಚಾಲಕ ರಸ್ತೆಬದಿಯ ಕಲ್ಲಿಗೆ ಡಿಕ್ಕಿಹೋಯಿ ಸವಾರ ಮೃತರಾಗಿದ್ದರು. ಈ ವ್ಯಕ್ತಿಯ ವಾರ್ಷಿಕ ಆದಾಯ ₹40,000 ಕ್ಕೂ ಅಧಿಕವಾಗಿದ್ದ ಕಾರಣ, ಮೊದಲು ಮೋಟಾರು ವಾಹನ ಪರಿಹಾರ ಕ್ಲೇಮ್ ನ್ಯಾಯಾಧಿಕಾರಣ ಅವರು ಪರಿಹಾರ ನಿಗದಿಗೆ ನಿರಾಕರಣೆ ನೀಡಿದ್ದರು .

ಆದರೂ, ಹೈಕೋರ್ಟ್ ನ್ಯಾಯಮೂರ್ತಿ ಮನ್ಮಥರಾವ್ ಪೀಠ ಈ ನಿರಾಕರಣೆಯನ್ನು ಖಂಡಿಸಿ, ಅಪಘಾತದಲ್ಲಿ ತಪ್ಪಿಲ್ಲದ ಸವರುಗಳಿಗೂ ಮಿತಿಯಿಲ್ಲದೆ ಪರಿಹಾರ ನೀಡಬೇಕು ಎಂದು ಆದೇಶ ನೀಡಿದರು.
ಈ ಆದೇಶದ ಮೂಲಕ, ಯಾವುದೇ ತಪ್ಪು ಇಲ್ಲದ ಅಪಘಾತದಲ್ಲಿ ಸಾವು ಅಥವಾ ಗಾಯಗಳಿಗೆ ಪರಿಹಾರ ಹಕ್ಕನ್ನು ಖಚಿತಗೊಳಿಸಲಾಗಿದೆ , ಮತ್ತು ವಾಹನಗಳಲ್ಲಿ ನಷ್ಟ ಅನುಭವಿಸಿರುವ ಕುಟುಂಬಗಳಿಗೆ ನ್ಯಾಯ ದೊರಕಲು ಹಾದಿ ತೆರೆಯಲಾಗಿದೆ .

