Ashwaveega News 24×7 ಮಾರ್ಚ್ 24 – 2026 : ಬಾಗಲಕೋಟೆ ಉಪಚುನಾವಣೆಯಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಳ್ಳುತ್ತಿದ್ದಂತೆ, ಸಿಎಂ ಆಪ್ತನೆ ಕಿಂಗ್ಮೇಕರ್ ಆಗಬಹುದೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಚುನಾವಣೆಯಲ್ಲಿ ಹೊಳಬಸು ಶೆಟ್ಟರ ಪ್ರಾಬಲ್ಯ ಹೆಚ್ಚಾಗಿದೆ , ಸಂಪನ್ಮೂಲಗಳ ಕ್ರೂಢೀಕರಣ ಮತ್ತು ಕ್ಷೇತ್ರದಲ್ಲಿ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿರುವ ವ್ಯಕ್ತಿಯಾಗಿ ಅವರು ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಒಳಗಡೆ ಕೂಡ ಈ ಬಗ್ಗೆ ಚರ್ಚೆಗಳು ಜೋರಾಗಿವೆ.
ಇನ್ನೊಂದೆಡೆ, ಮಹಾದೇವಿ ಮೇಟಿ ಅವರು ಈ ಹಿಂದೆ ಹೊಳಬಸು ಶೆಟ್ಟರರನ್ನು ದೂರವಿಡಬೇಕು . ಆದರೆ ಅವರ ತಂತ್ರಗಾರಿಕೆ ಉಪಚುನಾವಣೆಯಲ್ಲಿ ಫಲಿಸದ ಹಿನ್ನೆಲೆ, ಈಗ ಪಕ್ಷದ ನಾಯಕರು ಮತ್ತೆ ಹೊಳಬಸು ಶೆಟ್ಟರರನ್ನು ಸಂಪರ್ಕಿಸುವತ್ತ ಮುಂದಾಗಿದ್ದಾರೆ.
ಮಾಜಿ ಸಚಿವ ಅಜಯ ಕುಮಾರ ಸರನಾಯಕ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಹೊಳಬಸು ಶೆಟ್ಟರರನ್ನು ಕರೆಸಿ ಬೆಂಬಲ ಕೋರಲಾಗಿದೆ . ಸಿಎಂ ಆಪ್ತರ ಬೆಂಬಲವಿಲ್ಲದೇ ಚುನಾವಣೆಯಲ್ಲಿ ಯಶಸ್ಸು ಸಾಧಿಸುವುದು ಕಷ್ಟ ಎಂಬ ಅಭಿಪ್ರಾಯ ನಾಯಕರು ವ್ಯಕ್ತಪಡಿಸಿದ್ದಾರೆ.
ಹೊಳಬಸು ಶೆಟ್ಟರರು ಹೆಚ್.ವೈ. ಮೇಟಿ ಅವರಿಗೂ ಆಪ್ತರಾಗಿದ್ದರೂ, ಮಹಾದೇವಿ ಮೇಟಿ ಅವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ವಿಚಾರವೂ ಇದೀಗ ಮತ್ತೆ ಚರ್ಚೆಗೆ ಬಂದಿದೆ. ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ನಾಯಕರು ತೆರೆಮರೆಯಲ್ಲಿ ತಂತ್ರ ರೂಪಿಸುತ್ತಿದ್ದು, ಹೊಳಬಸು ಶೆಟ್ಟರರನ್ನು ಮನವೊಲಿಸಲು ಮುಂದಾಗಿರುವುದು ಗಮನ ಸೆಳೆದಿದೆ ..
ಒಟ್ಟಾರೆ, ಬಾಗಲಕೋಟೆ ಉಪಚುನಾವಣೆಯಲ್ಲಿ ಸಿಎಂ ಆಪ್ತರ ಪಾತ್ರ ಮಹತ್ವ ಪಡೆದುಕೊಳ್ಳುತ್ತಿದ್ದು, ಮುಂದಿನ ರಾಜಕೀಯ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.
