Ashwaveega News 24×7 ಮಾರ್ಚ್ 24 – 2026 : ಬಾಗಲಕೋಟೆ ಉಪಚುನಾವಣೆಯ ಅಖಾಡದಲ್ಲಿ “ಕಣ್ಣೀರ ರಾಜಕೀಯ” ಶುರುವಾಯಿತೇ ಎಂಬ ಪ್ರಶ್ನೆ ಇದೀಗ ಚರ್ಚೆಗೆ ಕಾರಣವಾಗಿದೆ. ಅನುಕಂಪದ ಅಲೆ ಸೃಷ್ಟಿಸಲು ಮೇಟಿ ಕುಟುಂಬ ಮುಂದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸಿಎಂ ಹಾಗೂ ಡಿಸಿಎಂ ಸೇರಿದಂತೆ ಹಲವು ಸಚಿವರು ಭಾಗವಹಿಸಿದ್ದ ಬಹಿರಂಗ ಸಭೆಯಲ್ಲಿ ಭಾವನಾತ್ಮಕ ಕ್ಷಣಗಳು ಮೂಡಿದವು. ಭಾಷಣದ ವೇಳೆ H.Y. ಮೇಟಿ ಅವರ ಮಕ್ಕಳಾದ ಬಾಯಕ್ಕ, ಮಲ್ಲಿಕಾರ್ಜುನ, ಉಮೇಶ್ ಮತ್ತು ಮಹಾದೇವಿ ಮೇಟಿ ಕಣ್ಣೀರು ಹಾಕಿ ತಂದೆಯನ್ನು ಸ್ಮರಿಸಿದರು.
ವೇದಿಕೆಯಲ್ಲಿ ಕುಟುಂಬದ ನಾಲ್ವರು ಮಕ್ಕಳು ಕಣ್ಣೀರು ಹಾಕಿದ ದೃಶ್ಯವು ಸಾರ್ವಜನಿಕರಲ್ಲಿ ಭಾವನಾತ್ಮಕ ಸ್ಪಂದನೆ ಮೂಡಿಸಿದ್ದು, ರಾಜಕೀಯ ವಲಯದಲ್ಲಿ ಇದು ಅನುಕಂಪ ಪಡೆಯುವ ಪ್ರಯತ್ನವೇ ಎಂಬ ಚರ್ಚೆಗೆ ಕಾರಣವಾಗಿದೆ .
ಬಹಿರಂಗ ವೇದಿಕೆಯಲ್ಲಿ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಿದರೂ, ಈ ಭಾವನಾತ್ಮಕ ಕ್ಷಣ ಚುನಾವಣೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಗಮನಾರ್ಹವಾಗಿದೆ. ಮೇಟಿ ಮಕ್ಕಳನ್ನು ಸಿಎಂ ಹಾಗೂ ಡಿಸಿಎಂ ಸಮಾಧಾನಪಡಿಸಿದ ದೃಶ್ಯವೂ ಗಮನ ಸೆಳೆದಿದ್ದು, ನಾಯಕರು ಕುಟುಂಬದೊಂದಿಗೆ ಬೆಂಬಲ ಸೂಚಿಸಿದರು.
ಒಟ್ಟಾರೆ, ಬಾಗಲಕೋಟೆ ಉಪಚುನಾವಣೆಯಲ್ಲಿ ಭಾವನಾತ್ಮಕ ಅಂಶಗಳು ಪ್ರಮುಖ ಪಾತ್ರವಹಿಸುತ್ತಿರುವುದು ಸ್ಪಷ್ಟವಾಗಿದ್ದು, ಮತದಾರರ ಮೇಲೆ ಇದರ ಪರಿಣಾಮ ಎಷ್ಟಿರಬಹುದು ಎಂಬುದನ್ನು ಕಾದು ನೋಡಬೇಕಾಗಿದೆ.
