Ashwaveega News 24×7 ಮಾರ್ಚ್ 24 – 2026 : ಪೆಟ್ರೋಲ್ ನೋ ಸ್ಟಾಕ್ ಎಂಬ ವದಂತಿ ಹಿನ್ನೆಲೆಯಲ್ಲಿ ಬೆಳಗಾವಿ ಭಾಗದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವದಂತಿ ನಂಬಿದ ಸವಾರರು ಪೆಟ್ರೋಲ್ ಬಂಕ್ಗಳತ್ತ ಮುಗಿಬಿದ್ದಿದ್ದು, ಎಲ್ಲೆಡೆ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದೆ .
ಬೆಳಗಾವಿ ನಗರ ಹಾಗೂ ಹುಕ್ಕೇರಿ ಪ್ರದೇಶಗಳಲ್ಲಿ ನೂಕುನುಗ್ಗಲು ಉಂಟಾಗಿದ್ದು, ಮಧ್ಯರಾತ್ರಿಯಿಂದಲೇ ಜನರು ಬಂಕ್ಗಳ ಬಳಿ ಕ್ಯೂನಲ್ಲಿ ನಿಂತಿರುವ ದೃಶ್ಯ ಕಂಡುಬಂದಿದೆ. “ನಾಲ್ಕು ದಿನ ಪೆಟ್ರೋಲ್, ಡೀಸೆಲ್ ಸಿಗುವುದಿಲ್ಲ” ಎಂಬ ಮಾತು ಹರಡುತ್ತಿದ್ದಂತೆ ಜನರು ಪ್ಯಾನಿಕ್ಗೆ ಒಳಗಾಗಿದ್ದಾರೆ .
ಹಲವರು ಬಾಟಲ್ ಮತ್ತು ಕ್ಯಾನ್ಗಳನ್ನು ತೆಗೆದುಕೊಂಡು ಬಂದು ಹೆಚ್ಚುವರಿ ಪೆಟ್ರೋಲ್ ಸಂಗ್ರಹಿಸಲು ಮುಂದಾಗಿರುವುದು ಗಮನಾರ್ಹವಾಗಿದೆ. ಇದರಿಂದ ಬಂಕ್ಗಳಲ್ಲಿ ಭಾರೀ ಗದ್ದಲ ಉಂಟಾಗಿದೆ. ಸವಾರರ ನಿಯಂತ್ರಣಕ್ಕಾಗಿ ಪೊಲೀಸರು ಹರಸಾಹಸ ಪಡುತ್ತಿದ್ದು, ಪರಿಸ್ಥಿತಿ ಹತೋಟಿಗೆ ತರಲು ಕ್ರಮ ಕೈಗೊಳ್ಳಲಾಗಿದೆ. ಅಧಿಕಾರಿಗಳು ವದಂತಿಗಳಿಗೆ ಕಿವಿಗೊಡಬಾರದು ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಒಟ್ಟಾರೆ, ಅಸತ್ಯ ವದಂತಿಯೇ ಜನರಲ್ಲಿ ಆತಂಕ ಉಂಟುಮಾಡಿ, ಪೆಟ್ರೋಲ್ ಬಂಕ್ಗಳಲ್ಲಿ ಗೊಂದಲ ಸೃಷ್ಟಿಸಿದಂತಾಗಿದೆ.
