Ashwaveega News 24×7 ಮಾರ್ಚ್ 24 – 2026 : ಇಂದು ಐತಿಹಾಸಿಕ ಬೆಂಗಳೂರು ಕರಗ ಉತ್ಸವಕ್ಕೆ ಚಾಲನೆ ದೊರಕುತ್ತಿದೆ. ವಿಶ್ವವಿಖ್ಯಾತ ಈ ಉತ್ಸವ 11 ದಿನಗಳ ಕಾಲ ನಡೆಯಲಿದ್ದು, ನಗರದಲ್ಲಿ ಧಾರ್ಮಿಕ ಸಂಭ್ರಮ ಮನೆ ಮಾಡಿದೆ .
ಇಂದು ಸಂಜೆ ತಿಗಳರಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಧ್ವಜಾರೋಹಣದ ಮೂಲಕ ಉತ್ಸವಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಪ್ರತೀ ವರ್ಷವೂ ವೈಭವದಿಂದ ನಡೆಯುವ ಈ ಕರಗ ಉತ್ಸವ ಈ ಬಾರಿಯೂ ಭಕ್ತರ ಆಕರ್ಷಣೆಯ ಕೇಂದ್ರವಾಗಿದೆ.
ಒಟ್ಟು 11 ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಮಾರ್ಚ್ 30 ರಂದು ಹಸಿ ಕರಗ ನಡೆಯಲಿದ್ದು, ಏಪ್ರಿಲ್ 1ರಂದು ಮಧ್ಯರಾತ್ರಿ ಕರಗ ಉತ್ಸವ ಶಕ್ತೋತ್ಸವವಾಗಿ ನೆರವೇರಲಿದೆ. ಈ ವಿಶೇಷ ಸಂದರ್ಭದಲ್ಲಿ ದ್ರೌಪದಿ ದೇವಿಯ ಹೂವಿನ ಕರಗ ನಗರದಲ್ಲೆಲ್ಲ ಸಂಚರಿಸಿ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಲಿದೆ.

ಈ ಬಾರಿ ಎ. ಜ್ಞಾನೇಂದ್ರ ಸ್ವಾಮಿ ಕರಗ ಹೊರುವ ಜವಾಬ್ದಾರಿ ಹೊತ್ತಿದ್ದಾರೆ . ಸುಮಾರು 10 ಲಕ್ಷಕ್ಕೂ ಹೆಚ್ಚು ಭಕ್ತರು ಈ ಉತ್ಸವದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಕರಗ ಶಕ್ತೋತ್ಸವದ ಕುರಿತು ಇಂದು ಬೆಳಿಗ್ಗೆ 11 ಗಂಟೆಗೆ ಸುದ್ದಿಗೋಷ್ಠಿ ನಡೆಯಲಿದ್ದು, ಉತ್ಸವದ ವ್ಯವಸ್ಥೆಗಳ ಬಗ್ಗೆ ವಿವರ ನೀಡಲಾಗುತ್ತದೆ.
ಒಟ್ಟಾರೆ , ಬೆಂಗಳೂರು ಕರಗ ಉತ್ಸವದೊಂದಿಗೆ ನಗರ ಧಾರ್ಮಿಕ ಭಕ್ತಿಭಾವದಿಂದ ಮೆರೆಯಲಿದ್ದು, ಐತಿಹಾಸಿಕ ಸಂಪ್ರದಾಯ ಮತ್ತೊಮ್ಮೆ ಜೀವಂತವಾಗುತ್ತಿದೆ.
