Ashwaveega News 24×7 ಮಾರ್ಚ್ 24 – 2026 ಬೆಂಗಳೂರು : ಯುದ್ಧದ ಅನಿಶ್ಚಿತ ಪರಿಸ್ಥಿತಿಯ ಮಧ್ಯೆಯೂ ಬಂಗಾರ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಕಾಣಿಸಿಕೊಂಡಿದೆ. ಕಳೆದ ಕೆಲ ದಿನಗಳಿಂದ ನಿರಂತರ ಏರಿಕೆ ಕಂಡು ಜನರಲ್ಲಿ ಆತಂಕ ಮೂಡಿಸಿದ್ದ ಚಿನ್ನದ ಬೆಲೆ ಇದೀಗ ಡೌನ್ಫಾಲ್ ಆಗಿರುವುದು ಗ್ರಾಹಕರಿಗೆ ಸಿಹಿ ಸುದ್ದಿಯಾಗಿದೆ.
ಪ್ರಸ್ತುತ 10 ಗ್ರಾಂ ಬಂಗಾರದ ಬೆಲೆ ಸುಮಾರು 1 ಲಕ್ಷ 44 ಸಾವಿರ ರೂಪಾಯಿಗೆ ಇಳಿಕೆಯಾಗಿದೆ. ಕಳೆದ ಮೂರು ದಿನಗಳಿಂದ ಚಿನ್ನದ ದರ ಕುಸಿತ ಕಂಡು ಬರುತ್ತಿದ್ದು, ಮಾರುಕಟ್ಟೆಯಲ್ಲಿ ಸ್ವಲ್ಪ ಮಟ್ಟಿನ ಸ್ಥಿರತೆ ಕಂಡುಬರುತ್ತಿದೆ.
ಇದರ ಜೊತೆಗೆ ಬೆಳ್ಳಿ ದರವೂ ಇಳಿಕೆಯಾಗಿದ್ದು, ಪ್ರಸ್ತುತ ಒಂದು ಕೆಜಿ ಬೆಳ್ಳಿಯ ಬೆಲೆ ಸುಮಾರು 2 ಲಕ್ಷ 30 ಸಾವಿರ ರೂಪಾಯಿಯಾಗಿದೆ. ಜಾಗತಿಕ ಯುದ್ಧದ ಪರಿಣಾಮದಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆಗಳತ್ತ ತಿರುಗಿದ ಪರಿಣಾಮ ಮಾರುಕಟ್ಟೆಯಲ್ಲಿ ಏರಿಳಿತಗಳು ಕಾಣಿಸುತ್ತಿವೆ.
ಗ್ರಾಹಕರಿಗೆ ಇದು ಖುಷಿಯ ವಿಚಾರವಾದರೂ, ಹೂಡಿಕೆದಾರರಿಗೆ ಮಾತ್ರ ಸ್ವಲ್ಪ ಟೆನ್ಶನ್ ಮೂಡಿಸಿದೆ. ಮುಂದಿನ ದಿನಗಳಲ್ಲಿ ದರ ಏರಿಕೆಯಾಗುತ್ತದೆಯೋ ಅಥವಾ ಇನ್ನಷ್ಟು ಇಳಿಕೆಯಾಗುತ್ತದೆಯೋ ಎಂಬ ಕುತೂಹಲ ಮಾರುಕಟ್ಟೆಯಲ್ಲಿ ಮುಂದುವರಿದಿದೆ.
ಹೀಗಾಗಿ ಬಂಗಾರ ಮತ್ತು ಬೆಳ್ಳಿ ಖರೀದಿಸಲು ಯೋಚಿಸುತ್ತಿರುವವರು ಈ ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.
