Ashwaveega News 24×7 ಮಾರ್ಚ್ 25 – 2026 : ಬೆಂಗಳೂರು : ಇತ್ತೀಚೆಗೆ ಗಣನೀಯವಾಗಿ ಇಳಿಕೆ ಕಂಡಿದ್ದ ಬಂಗಾರ ಮತ್ತು ಬೆಳ್ಳಿ ದರಗಳು ಇದೀಗ ಮತ್ತೆ ಏರಿಕೆಯ ಹಾದಿ ಹಿಡಿದಿವೆ. ಇದರಿಂದ ಕಡಿಮೆ ದರದಲ್ಲಿ ಖರೀದಿ ಮಾಡುವ ಅವಕಾಶವನ್ನು ಕೆಲವರು ಮಿಸ್ ಮಾಡಿಕೊಂಡರಾ ಎಂಬ ಪ್ರಶ್ನೆ ಮೂಡಿದೆ.
ಕಳೆದ ಎರಡು ದಿನಗಳಿಂದ ಡೌನ್ಫಾಲ್ನಲ್ಲಿದ್ದ ಚಿನ್ನದ ಬೆಲೆ, ಯುದ್ಧದ ಪರಿಣಾಮದಿಂದ ಸುಮಾರು 1 ಲಕ್ಷ 33 ಸಾವಿರ ರೂಪಾಯಿವರೆಗೆ ಇಳಿಕೆಯಾಗಿತ್ತು. ಆದರೆ ಇದೀಗ ಅಚ್ಚರಿಯ ರೀತಿಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ.
ಪ್ರಸ್ತುತ 10 ಗ್ರಾಂ ಬಂಗಾರದ ಬೆಲೆ ಸುಮಾರು 1 ಲಕ್ಷ 50 ಸಾವಿರ ರೂಪಾಯಿಗೆ ತಲುಪಿದ್ದು, ಕೇವಲ ಎರಡು ದಿನಗಳಲ್ಲಿ ಸುಮಾರು 17 ಸಾವಿರ ರೂಪಾಯಿ ಏರಿಕೆಯಾಗಿದೆ.
ಇದೇ ರೀತಿ ಬೆಳ್ಳಿ ದರದಲ್ಲೂ ಭಾರೀ ಏರಿಕೆ ಕಂಡುಬಂದಿದೆ. ಎರಡು ದಿನಗಳಲ್ಲಿ ಸುಮಾರು 40 ಸಾವಿರ ರೂಪಾಯಿ ಏರಿಕೆಯಾಗಿ, ಪ್ರಸ್ತುತ ಒಂದು ಕೆಜಿ ಬೆಳ್ಳಿಯ ಬೆಲೆ 2 ಲಕ್ಷ 41 ಸಾವಿರ ರೂಪಾಯಿಗೆ ತಲುಪಿದೆ.
ಜಾಗತಿಕ ಯುದ್ಧದ ಅನಿಶ್ಚಿತತೆ, ತೈಲ ಬಿಕ್ಕಟ್ಟು ಹಾಗೂ ಹೂಡಿಕೆದಾರರ ನಡೆ-ನುಡಿಗಳು ಮಾರುಕಟ್ಟೆಯಲ್ಲಿ ಏರಿಳಿತಕ್ಕೆ ಕಾರಣವಾಗುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆ, ಚಿನ್ನ ಮತ್ತು ಬೆಳ್ಳಿ ದರದ ಈ ಏರಿಳಿತದಿಂದ ಗ್ರಾಹಕರು ಗೊಂದಲಕ್ಕೆ ಒಳಗಾಗಿದ್ದು, ಹೂಡಿಕೆದಾರರು ಕೂಡ ಎಚ್ಚರಿಕೆಯಿಂದ ಮುಂದುವರಿಯುತ್ತಿದ್ದಾರೆ.
