Ashwaveega News 24×7 ಮಾರ್ಚ್25 ಮದುವೆ ಹೊಸ್ತಿಲಲ್ಲಿದ್ದ ಇಸ್ರೇಲ್ ಯೋಧೆ ದಾರುಣವಾಗಿ ಹತ್ಯೆಯಾಗಿದ್ದಾರೆ. ಹಿಜ್ಬುಲ್ಲಾ ಬಂಡುಕೋರರ ದಾಳಿಗೆ ಬಲಿಯಾಗಿದ್ದಾರೆ.

ನುರಿಯಲ್ ಡುಬಿನ್(27) ಮೃತ ಯೋಧೆ. ಉತ್ತರ ಇಸ್ರೇಲ್ ನಲ್ಲಿ ಹಿಜ್ಬುಲ್ಲಾ ಬಂಡುಕೋರರು ನಡೆಸಿದ ದಾಳಿಗೆ ಡುಬಿನ್ ತುತ್ತಾಗಿದ್ದರು. ಭಯೋತ್ಪಾದಕ ಸಂಘಟನೆಯು ಲೆಬನಾನಿನ ಪ್ರದೇಶದಿಂದ ಉತ್ತರ ಇಸ್ರೇಲ್ ನಲ್ಲಿರುವ ಸಮುದಾಯಗಳ ಮೇಲೆ 38 ರಾಕೆಟ್ ಗಳ ಭಾರಿ ದಾಳಿ ನಡೆಸಿದ ನಂತರ ಮೊಶಾವ್ ಮಾರ್ಗಲಿಯೊಟ್ ನ ಡುಬಿನ್ ಹತ್ಯೆಗೀಡಾಗಿದ್ದಾರೆ.
ಮಚನಾಯಿಮ್ ಜಂಕ್ಷನ್ ಪ್ರದೇಶದಲ್ಲಿ ರಾಕೆಟ್ ಗಳ ದಾಳಿ ನಡೆಸಲಾಯಿತು. ದಾಳಿಗೆ ಯೋಧೆ ಬಲಿಯಾಗಿದ್ದಾರೆ. ಇತರ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮ್ಯಾಗೆನ್ ಡೇವಿಡ್ ಆಡಮ್ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿ ಡುಬಿನ್ ಗೆ ಜೀವ ಉಳಿಸುವ ವೈದ್ಯಕೀಯ ಚಿಕಿತ್ಸೆ ನೀಡಲು ಮುಂದಾದವು. ಅದರೆ, ಅಷ್ಟೊತ್ತಿಗೆ ಯೋಧೆ ಮೈತಪಟ್ಟಿದ್ದರು. ಇದಕ್ಕೂ ಮೊದಲು ಇರಾನ್ನಿಂದ ಹಾರಿಸಿದ ಕ್ಷಿಪಣಿಯಿಂದ ಬೆಡೋಯಿನ್ ಸಮುದಾಯದ ವೈದ್ಯರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಅವರ ಪತ್ನಿ ಮತ್ತು ಇಬ್ಬರು ಮಕ್ಕಳಿಗೂ ಗಾಯಗಳಾಗಿದ್ದವು. ಘಟನಾ ಸ್ಥಳಕ್ಕೆ ಕರೆಸಿಕೊಂಡ ಎಂಡಿಎ ತಂಡಗಳು ಮೂವರು ಗಾಯಾಳುಗಳಿಗೆ ಚಿಕಿತ್ಸೆ ನೀಡಿ ಬೀರ್ ಶೆವಾದಲ್ಲಿರುವ ಸೊರೊಕಾ ಆಸ್ಪತ್ರೆಗೆ ಸ್ಥಳಾಂತರಿಸಿದವು. ನೆಗೆವ್ ಮತ್ತು ಗಾಜಾ ಸುತ್ತಮುತ್ತ ಸೈರನ್ಗಳು ಸದ್ದು ಮಾಡುತ್ತಿವೆ
