Ashwaveega news 24×7ಮಾರ್ಚ್ 27.2026 :ಮಧ್ಯಪ್ರಾಚ್ಯ ಭೀಕರ ಯುದ್ಧ 28ನೇ ದಿನಕ್ಕೆ ಕಾಲಿಟ್ಟಿದೆ. ಇವತ್ತೂ ಇಸ್ರೇಲ್ – ಇರಾನ್ ವಾರ್ ಮುಂದುವರಿದಿದೆ. ಇರಾನ್ ನ ಕೋಮ್ ನಗರದಲ್ಲಿ ಇಸ್ರೇಲ್-ಅಮೇರಿಕ ಜಂಟಿ ದಾಳಿ ನಡೆಸಿವೆ. ವಸತಿ ಪ್ರದೇಶದ ಮೇಲೆ ವಾಯುದಾಳಿ ನಡೆಸಿದ್ದು, 6 ಜನರು ಹತ್ಯೆಯಾಗಿದ್ದಾರೆ.

ವಸತಿ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ಮತ್ತೊಂದೆಡೆ, ಹೆಜ್ಬೊಲ್ಲಾ ಹುಟ್ಟಡಗಿಸಲು ಪಣತೊಟ್ಟಿರುವ ಇಸ್ರೇಲ್, ಲೆಬನಾನ್ ಮೇಲೆ ನಿರಂತರ ದಾಳಿ ನಡೆಸಿದೆ. ಇಸ್ರೇಲ್ ದಾಳಿಯಲ್ಲಿ 13 ಮಂದಿ ಬಲಿಯಾಗಿದ್ದಾರೆ.
ಇನ್ನೂ 10 ದಿನ ಕದನ ವಿರಾಮವನ್ನ ಟ್ರಂಪ್ ಮುಂದುವರಿಸಿದ್ದು, 10 ದಿನ ಇಂಧನ ಸ್ಥಾವರಗಳ ಮೇಲೆ ದಾಳಿ ಮಾಡಲ್ಲ. ಇರಾನ್ ಮನವಿ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಅಂತಾ ತಿಳಿಸಿದ್ದಾರೆ.
