Ashwaveega news 24×7ಮಾರ್ಚ್ 27.2026ಗಾಂಧೀನಗರ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆ 47,600 ಮೆಟ್ರಿಕ್ ಟನ್ ಎಲ್ಪಿಜಿಯನ್ನು ಹೊತ್ತ `ಜಗ್ ವಸಂತ್’ ಹಡಗು ಗುಜರಾತ್ನ ವಾಡಿನಾರ್ ಬಂದರಿಗೆ ಆಗಮಿಸಿದೆ.
ಸುಮಾರು ಒಂದು ತಿಂಗಳ ಕಾಲ ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿದ್ದ ಹಡಗುಗಳ ಪೈಕಿ ಇದು ಒಂದು. ಇದೀಗ ಗುಜರಾತ್ನ ವಾಡಿನಾರ್ ಬಂದರಿಗೆ ಆಗಮಿಸಿದ್ದು, ಗುರುವಾರ (ಮಾ.26) ತಡರಾತ್ರಿ 47,600 ಮೆಟ್ರಿಕ್ ಟನ್ ಎಲ್ಪಿಜಿಯನ್ನು ಹೊತ್ತುತಂದಿದೆ. ಈ ಮೂಲಕ ದೇಶದಲ್ಲಿ ಉಂಟಾಗುತ್ತಿರುವ ಅನಿಲ ಪೂರೈಕೆ ಒತ್ತಡ ಕಡಿಮೆಯಾಗಲಿದೆ.

ಇನ್ನೂ 45,000 ಮೆಟ್ರಿಕ್ ಟನ್ ಎಲ್ಪಿಜಿ ಹೊತ್ತ 2ನೇ ಎಲ್ಪಿಜಿ ಟ್ಯಾಂಕರ್ ಪೈನ್ ಗ್ಯಾಸ್ ಶೀಘ್ರದಲ್ಲೇ ನವ ಮಂಗಳೂರು ಬಂದರಿಗೆ ಆಗಮಿಸಲಿದೆ. ಈ ಹಡಗು ಬಂದ ಬಳಿಕ 92,000 ಮೆಟ್ರಿಕ್ ಟನ್ಗಳಿಗಿಂತ ಅಧಿಕ ಎಲ್ಪಿಜಿ ಸಂಗ್ರಹವಾಗಲಿದೆ. ಇದು ಸರಿಸುಮಾರು ದೇಶದ ಜನರಿಗೆ ಒಂದು ದಿನದ ಅಡಿಗೆ ಅನಿಲ ಬಳಕೆಗೆ ಸಮನಾಗಿದೆ.