Ashwaveega news 24×7ಮಾರ್ಚ್28.2026ಬೆಂಗಳೂರು: ಇಂದಿನ 2026ರ ಐಪಿಎಲ್ ಆವೃತಿ ಆರಂಭವಾಗುತ್ತಿದೆ. ಈ ಹಿನ್ನಲೆ ಪಂದ್ಯದ ದಿನದಂದು ತಡರಾತ್ರಿ 2 ಗಂಟೆವರೆಗೆ ನಮ್ಮ ಮೆಟ್ರೋ ಕಾರ್ಯನಿರ್ವಹಿಸಲಿದೆ ಎಂದು BMRCL ತಿಳಿಸಿದೆ.
ಇಂದು (ಮಾ.28) RCB ಮತ್ತು SRH ನಡುವೆ ಮೊದಲ ಪಂದ್ಯ ನಡೆಯಲಿದೆ. ಹೀಗಾಗಿ ಮ್ಯಾಚ್ ನೋಡಿ ಹಿಂದಿರುಗುವವರಿಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ BMRCL ಈ ಕ್ರಮ ಕೈಗೊಂಡಿದೆ.

ಸಾಮನ್ಯವಾಗಿ ರಾತ್ರಿ 11 ಗಂಟೆಗೆ ಕೊನೆಯ ಮೆಟ್ರೋ ಸಂಚರಿಸುತ್ತಿತ್ತು. ಇದೀಗ ಐಪಿಎಲ್ ಪ್ರಾರಂಭವಾಗಿದ್ದು, ಪಂದ್ಯದ ದಿನದಂದು ಎಲ್ಲಾ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸೇವೆಯನ್ನು ರಾತ್ರಿ 11 ಗಂಟೆಯ ಬದಲಾಗಿ ತಡರಾತ್ರಿ 2 ಗಂಟೆಯವರೆಗೆ ವಿಸ್ತರಣೆ ಮಾಡಲಾಗಿದೆ. ಮೆಜಿಸ್ಟಿಕ್ ನಿಲ್ದಾಣದಿಂದ ನಾಲ್ಕೂ ದಿಕ್ಕುಗಳಿಗೆ ಕೊನೆಯ ರೈಲು ಮಧ್ಯರಾತ್ರಿ 1:30ಕ್ಕೆ ಹೊರಡಲಿದೆ.
ಇನ್ನೂ ಐಪಿಎಲ್ ಪಂದ್ಯದ ಟಿಕೆಟ್ ಗಳಲ್ಲಿ ಈಗಾಗಲೇ ನಮ್ಮ ಮೆಟ್ರೋ ಕ್ಯೂಆರ್ ಕೋಡ್ ಮುದ್ರಣಗೊಂಡಿದ್ದು, ಕ್ರೀಡಾಂಗಣಕ್ಕೆ ಬರುವವರು ಕಬ್ಬನ್ ಪಾರ್ಕ್ ಅಥವಾ ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣಗಳನ್ನು ಬಳಸಲು ಸೂಚನೆ ನೀಡಲಾಗಿದೆ. ವಾಹನ ದಟ್ಟಣೆ ನಿಯಂತ್ರಿಸಲು ನಗರದ 44 ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚಿನ ಪಾರ್ಕಿಂಗ್ ಮಾಡಲಾಗಿದೆ.
