Ashwaveega News 24×7 ಮಾರ್ಚ್ 30 – 2026 : ನವದೆಹಲಿ: ದೇಶದಲ್ಲಿ ಉಂಟಾಗಿರುವ ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸೀಮಿತ ಅವಧಿಗೆ ಮತ್ತೆ ಸೀಮೆಎಣ್ಣೆ ಪೂರೈಕೆ ಮಾಡಲು ಮುಂದಾಗಿದೆ.
ಕಚ್ಚಾ ತೈಲ ಹಾಗೂ ಎಲ್ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಪರಿಣಾಮ , ಅಡುಗೆ ಅನಿಲದ ಮೇಲಿನ ಒತ್ತಡ ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಆಯ್ದ ಪೆಟ್ರೋಲ್ ಬಂಕ್ಗಳಲ್ಲಿ ಸೀಮೆಎಣ್ಣೆ ಲಭ್ಯವಾಗಲಿದ್ದು, ಪ್ರತಿ ಜಿಲ್ಲೆಯಲ್ಲಿ ಎರಡು ಪೆಟ್ರೋಲ್ ಬಂಕ್ಗಳ ಮೂಲಕ ವಿತರಣೆ ಮಾಡುವ ಯೋಜನೆ ರೂಪಿಸಲಾಗಿದೆ .
ಅಡುಗೆ ಮತ್ತು ಬೆಳಕಿನ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ 60 ದಿನಗಳ ಅವಧಿಗೆ ಸೀಮೆಎಣ್ಣೆ ಪೂರೈಕೆ ಮಾಡಲಾಗುತ್ತದೆ. ವಿಶೇಷವಾಗಿ ಬಡ ಮತ್ತು ಗ್ರಾಮೀಣ ಕುಟುಂಬಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ.
ಈ ಹಿಂದೆ 21 ರಾಜ್ಯಗಳಲ್ಲಿ ಸೀಮೆಎಣ್ಣೆ ಮುಕ್ತ ರಾಜ್ಯಗಳೆಂದು ಘೋಷಿಸಲಾಗಿದ್ದರೂ, ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾತ್ಕಾಲಿಕವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದಕ್ಕೆ ಮಧ್ಯೆ, ನಿನ್ನೆ ಮಾತ್ರ ಸೌದೆ ಒಲೆ ಬಳಸುವಂತೆ ಹೇಳಿಕೆ ನೀಡಿದ್ದ ಸಚಿವ ಮುನಿಯಪ್ಪ ಅವರ ಮಾತು ಚರ್ಚೆ ಆಗ್ತಾಯಿದೆ ….
