Ashwaveega News 24×7 ಮಾರ್ಚ್ 30 – 2026 : ಬೆಂಗಳೂರು : ಜಾಗತಿಕ ಆರ್ಥಿಕ ಪರಿಸ್ಥಿತಿಗಳ ಪರಿಣಾಮವಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಮತ್ತೆ ಭಾರಿ ಏರಿಕೆ ಕಂಡು, ಹೂಡಿಕೆದಾರರು ಹಾಗೂ ಸಾಮಾನ್ಯ ಗ್ರಾಹಕರಲ್ಲಿ ಗೊಂದಲ ಉಂಟಾಗಿದೆ.
ಇತ್ತೀಚಿನ ವರದಿ ಪ್ರಕಾರ, 10 ಗ್ರಾಂ ಚಿನ್ನದ ಬೆಲೆ 1 ಲಕ್ಷ 51 ಸಾವಿರ ರೂಪಾಯಿಗೆ ಏರಿದ್ದು, ಇವತ್ತಿನ ದಿನದಲ್ಲೇ 2 ಸಾವಿರ ರೂಪಾಯಿ ಏರಿಕೆ ಕಂಡಿದೆ. ನಿರಂತರ ಇಳಿಕೆ ಕಾಣುತ್ತಿದ್ದ ಬೆಳ್ಳಿ ದರವೂ ತೀವ್ರ ಏರಿಕೆಯತ್ತ ಸಾಗಿದ್ದು, ಪ್ರಸ್ತುತ ಕೆಜಿ ಬೆಳ್ಳಿಯ ಬೆಲೆ 2 ಲಕ್ಷ 35 ಸಾವಿರ ರೂಪಾಯಿಯಾಗಿದೆ. ಕಳೆದ 2–3 ದಿನಗಳಲ್ಲಿ ಬೆಳ್ಳಿಯ ದರವು 25 ಸಾವಿರ ರೂಪಾಯಿಗಳಷ್ಟು ಏರಿಕೆಯು ಕಂಡಿದೆ.
ಈ ಏರಿಕೆ–ಇಳಿಕೆಗಳ ಕಾರಣದಿಂದ ಗ್ರಾಹಕರು ಬಂಗಾರ ಮತ್ತು ಬೆಳ್ಳಿ ಖರೀದಿಸುವ ಸಮಯವನ್ನು ಕುರಿತು ಫುಲ್ ಗೊಂದಲಕ್ಕೆ ಒಳಗಾಗಿದ್ದಾರೆ. ಹೂಡಿಕೆ ಮಾಡುವವರಿಗೆ ಎಚ್ಚರಿಕೆ ನೀಡಬೇಕಾದ ಸಮಯ ಮತ್ತು ದರದ ಪ್ರವೃತ್ತಿಗಳನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಬೇಕಾಗಿದೆ.
