Ashwaveega News 24×7 ಮಾರ್ಚ್ 31 – 2026 : ಬೈಎಲೆಕ್ಷನ್ ಕಣ ದಿನೇದಿನೇ ಕಾವೇರಿಸುತ್ತಿರುವ ನಡುವೆ, ಬಿಜೆಪಿ ಶಿಬಿರದಲ್ಲಿ ಮಹತ್ವದ ರಾಜಕೀಯ ಚಟುವಟಿಕೆಗಳು ಜೋರಾಗಿವೆ. ಪಕ್ಷದ ಗೆಲುವಿಗಾಗಿ ಎಲ್ಲ ಸಾಧ್ಯ ಪ್ರಯತ್ನಗಳನ್ನು ಕೈಗೊಳ್ಳಬೇಕೆಂಬ ನಿರ್ಧಾರಕ್ಕೆ ನಾಯಕರು ಬಂದಿದ್ದು, ಈ ನಡುವೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಪಾತ್ರ ಕುತೂಹಲಕ್ಕೆ ಕಾರಣವಾಗಿದೆ.
ಇತ್ತ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದಲ್ಲಿ ಹಿರಿಯ ನಾಯಕರು ಯತ್ನಾಳ್ರನ್ನು ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ಪರ ಪ್ರಚಾರಕ್ಕೆ ಯತ್ನಾಳ್ ಒಪ್ಪಿಗೆ ಸೂಚಿಸಿದ್ದಾರೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆ ಆಗ್ತಾಯಿದೆ …
ಮೂಲಗಳ ಪ್ರಕಾರ, ಪಕ್ಷದ ಹೆಸರಿನಲ್ಲಿ ಅಧಿಕೃತ ಪ್ರಚಾರ ಮಾಡುವುದಕ್ಕೆ ಕೆಲ ಅಡೆತಡೆಗಳಿದ್ದರೂ, ವೈಯಕ್ತಿಕವಾಗಿ ಕ್ಯಾಂಪೇನ್ ನಡೆಸುವುದಕ್ಕೆ ಅವಕಾಶ ನೀಡುವ ಬಗ್ಗೆ ಚರ್ಚೆಗಳು ನಡೆದಿವೆ. ಯತ್ನಾಳ್ ಪ್ರಚಾರ ಮಾಡಿದರೆ ಅದು ಪಕ್ಷಕ್ಕೆ ಪ್ಲಸ್ ಆಗುತ್ತದೆ ಎಂಬ ಅಭಿಪ್ರಾಯವೂ ನಾಯಕರು ವ್ಯಕ್ತಪಡಿಸಿದ್ದಾರೆ.
ವೀರಣ್ಣ ಚರಂತಿಮಠ ಪರವಾಗಿ ಬ್ಯಾಟ್ ಬೀಸಲು ಯತ್ನಾಳ್ ಸಿದ್ಧರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು, “ಹಿಂದೂ ಹುಲಿ” ಎಂದೇ ಹೆಸರಾದ ಯತ್ನಾಳ್ ಯಾವುದೇ ಕ್ಷಣದಲ್ಲಿ ಅಖಾಡಕ್ಕಿಳಿಯುವ ಸಾಧ್ಯತೆ ಇದೆ. ಇದು ಬೈಎಲೆಕ್ಷನ್ ರಾಜಕೀಯ ಸಮೀಕರಣಗಳಲ್ಲಿ ಮಹತ್ವದ ಬದಲಾವಣೆ ತರಬಹುದೆಂಬ ಅಂದಾಜು ವ್ಯಕ್ತವಾಗುತ್ತಿದೆ.
ಒಟ್ಟಾರೆ, ಬಿಜೆಪಿ ಗೆಲುವು ಸಾಧಿಸಲು ಎಲ್ಲಾ ಮಾರ್ಗಗಳನ್ನು ಬಳಸಿಕೊಳ್ಳಬೇಕೆಂಬ ತಂತ್ರದಲ್ಲಿ ನಾಯಕರು ಮುಂದುವರಿದಿದ್ದಾರೆ. ಯತ್ನಾಳ್ ಎಂಟ್ರಿ ಯಾವಾಗ? ಅದು ಅಧಿಕೃತವಾಗಿರುತ್ತದೆಯೇ ಅಥವಾ ವೈಯಕ್ತಿಕವಾಗಿರುತ್ತದೆಯೇ? ಎಂಬುದು ಮುಂದಿನ ರಾಜಕೀಯ ಬೆಳವಣಿಗೆಗಳ ಮೇಲೆ ಅವಲಂಬಿತವಾಗಿದೆ.
