Ashwaveega News 24×7 ಮಾರ್ಚ್ 31 – 2026 : ಬಿಜೆಪಿ ಬೈಎಲೆಕ್ಷನ್ ಅಖಾಡದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಪ್ರಚಾರಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗ್ರೀನ್ ಸಿಗ್ನಲ್ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರ ಹೆಜ್ಜೆ ಬೆನ್ನಲ್ಲೇ ಬಿಎಸ್ವೈ ಕೂಡ ಯತ್ನಾಳ್ರನ್ನು ಪ್ರಚಾರಕ್ಕೆ ಸ್ವಾಗತಿಸಿರುವುದು . “ಯಾರೇ ಬಂದರೂ ಪಕ್ಷದ ಪರವಾಗಿ ಪ್ರಚಾರ ನಡೆಸಲು ಅವಕಾಶ ಇದೆ. ಯತ್ನಾಳ್ ಕೂಡ ಬರಲಿ, ಎಲ್ಲರೂ ಸ್ವಾಗತ ಮಾಡ್ತೇವೆ” ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
“ಹಿಂದೂ ಹುಲಿ” ಎಂದೇ ಖ್ಯಾತಿ ಪಡೆದ ಯತ್ನಾಳ್ ಮತಬೇಟೆಗೆ ಇಳಿಯುವ ಸೂಚನೆಗಳು ಇದೀಗ ಸ್ಪಷ್ಟವಾಗುತ್ತಿವೆ. ಬಿಎಸ್ವೈ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ, ಯಾವುದೇ ಕ್ಷಣದಲ್ಲಿ ಯತ್ನಾಳ್ ಬಿಜೆಪಿ ಅಭ್ಯರ್ಥಿ ಪರ ಕ್ಯಾಂಪೇನ್ಗೆ ಎಂಟ್ರಿ ಕೊಡಬಹುದೆಂಬ ನಿರೀಕ್ಷೆ ಹೆಚ್ಚಾಗಿದೆ.
ಇದಕ್ಕೆ ನಡುವೆ, ಇಡೀ ಸರ್ಕಾರವೇ ಉಪಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದೆ. ಸ್ವತಃ ಮುಖ್ಯಮಂತ್ರಿ ನಾಲ್ಕೈದು ದಿನಗಳ ಕಾಲ ಕ್ಷೇತ್ರದಲ್ಲೇ ತಂಗಿ ಪ್ರಚಾರ ನಡೆಸುತ್ತಿರುವುದು ಗಮನ ಸೆಳೆಯುತ್ತಿದೆ. ಇದರಿಂದ ಚುನಾವಣಾ ಪೈಪೋಟಿ ತೀವ್ರಗೊಂಡಿದೆ ಎಂಬ ಅರ್ಥ ಹೊರಬರುತ್ತಿದೆ .
ಇನ್ನೊಂದೆಡೆ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಎಸ್ವೈ, “ಜನ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸುತ್ತಾರೆ” ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಿಂದೆ ಬಿಎಸ್ವೈ ಕುಟುಂಬದ ವಿರುದ್ಧ ತೀವ್ರವಾಗಿ ಟೀಕಿಸಿದ್ದ ಯತ್ನಾಳ್ಗೆ ಈಗ ಪ್ರಚಾರಕ್ಕೆ ಅವಕಾಶ ಸಿಕ್ಕಿರುವುದು ರಾಜಕೀಯವಾಗಿ ಮಹತ್ವದ ತಿರುವು ಎಂದೇ ಹೇಳಬಹುದು …
ಒಟ್ಟಾರೆ, ಬಿಎಸ್ವೈ ಅನುಮತಿ ಹಿನ್ನೆಲೆಯಲ್ಲಿ ಯತ್ನಾಳ್ ಅಖಾಡಕ್ಕೆ ಎಂಟ್ರಿ ಕೊಡಲಿದೆಯೇ ? ಅವರ ಪ್ರಚಾರ ಬಿಜೆಪಿ ಗೆಲುವಿಗೆ ಎಷ್ಟು ಪರಿಣಾಮ ಬೀರುತ್ತದೆ ? ಎಂಬುದರ ಮೇಲೆ ಎಲ್ಲರ ಕಣ್ಣು ಇದೆ .
