Ashwaveega News 24×7 ಮಾರ್ಚ್ 31 – 2026 : ಬಾಗಲಕೋಟೆ ಬೈಎಲೆಕ್ಷನ್ ಅಖಾಡದಲ್ಲಿ ರಾಜಕೀಯ ತಾಪಮಾನ ಮತ್ತಷ್ಟು ಏರಿಕೆಯಾಗಿದ್ದು, ಹೊಸ ತಿರುವೊಂದು ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಸ್ಲಿಂ ಮುಖಂಡರು ಘೇರಾವ್ ಮಾಡಿ, ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ತಕ್ಷಣ ಪ್ರಚಾರಕ್ಕೆ ಕರೆಸಬೇಕೆಂದು ಒತ್ತಾಯಿಸಿದ್ದಾರೆ .
ನಿನ್ನೆ ತಡರಾತ್ರಿ ಸಿಎಂ ಅವರನ್ನು ಭೇಟಿಯಾದ ಮುಸ್ಲಿಂ ನಾಯಕರು, ಕ್ಷೇತ್ರದಲ್ಲಿ ಸಮುದಾಯದ ಮತಗಳನ್ನು ಒಗ್ಗೂಡಿಸಲು ಜಮೀರ್ ಅವರ ಹಾಜರಾತಿ ಅಗತ್ಯ ಎಂದು ಮನವಿ ಮಾಡಿದ್ದಾರೆ. ಕಾರಿನಲ್ಲೇ ಕುಳಿತುಕೊಂಡು ಸಿಎಂ ಸಿದ್ದರಾಮಯ್ಯ ಮುಸ್ಲಿಂ ಮುಖಂಡರೊಂದಿಗೆ ಚರ್ಚೆ ನಡೆಸಿದ ಘಟನೆ ಗಮನ ಸೆಳೆದಿದೆ.
ಈ ವೇಳೆ ಪ್ರತಿಕ್ರಿಯಿಸಿದ ಸಿಎಂ, “ನಾವು ಅಹಿಂದ ತತ್ವದವರು, ಯಾವಾಗಲೂ ನಿಮ್ಮ ಜೊತೆಯಲ್ಲಿದ್ದೇವೆ” ಎಂದು ಭರವಸೆ ನೀಡಿದ್ದಾರೆ. ಜೊತೆಗೆ, ಜಮಾತ್ ಹಾಗೂ ಮುಸ್ಲಿಂ ಮುಖಂಡರ ಜೊತೆ ವಿಶೇಷ ಸಭೆ ನಡೆಸುವಂತೆ ಕೇಳಿದ ಮನವಿಗೂ ಸಮ್ಮತಿ ಸೂಚಿಸಿದ್ದಾರೆ .
ಇದಕ್ಕೆ ಪ್ರತಿಯಾಗಿ, “ಸರಿ… ನೋಡೋಣ” ಎಂದು ಸಿಎಂ ಹೇಳಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಮೂಲಗಳ ಪ್ರಕಾರ, ಜಮೀರ್ ಅಹ್ಮದ್ ಖಾನ್ ಅವರು ಏಪ್ರಿಲ್ 4ರವರೆಗೆ ಕೇರಳದಲ್ಲಿದ್ದು, ಏಪ್ರಿಲ್ 5ರಂದು ದಾವಣಗೆರೆಗೆ ಆಗಮಿಸುವ ಸಾಧ್ಯತೆ ಇದೆ. ನಂತರ 6 ಮತ್ತು 7ರಂದು ಬಾಗಲಕೋಟೆಯಲ್ಲಿ ಪ್ರಚಾರ ನಡೆಸುವ ಯೋಜನೆ ರೂಪಿಸಲಾಗಿದೆ .
ಸಿಎಂ ಸ್ವತಃ ಕೇವಲ ಒಂದು ದಿನ ದಾವಣಗೆರೆಯಲ್ಲಿ ಪ್ರಚಾರ ನಡೆಸಲಿದ್ದಾರೆ . ಉಳಿದ ದಿನಗಳಲ್ಲಿ ಬಾಗಲಕೋಟೆ ಕಡೆ ಹೆಚ್ಚು ಗಮನ ಹರಿಸಲಿದ್ದಾರೆ .
ಒಟ್ಟಾರೆ, ಮುಸ್ಲಿಂ ಸಮುದಾಯದ ಒತ್ತಡದ ನಡುವೆ ಜಮೀರ್ ಅವರನ್ನು ಪ್ರಚಾರಕ್ಕೆ ಕರೆಸುವ ನಿರ್ಧಾರ ಕಾಂಗ್ರೆಸ್ ಶಿಬಿರದಲ್ಲಿ ಮಹತ್ವದ ತಿರುವು ತರುವ ಸೂಚನೆ ನೀಡಿದೆ. ಇದರ ಪರಿಣಾಮ ಬೈಎಲೆಕ್ಷನ್ ಫಲಿತಾಂಶದ ಮೇಲೆ ಎಷ್ಟು ಬೀರುತ್ತದೆ ಎಂಬುದು ಕುತೂಹಲ ಮೂಡಿಸಿದೆ .
