Ashwaveega News 24×7 ಮಾರ್ಚ್ 31 – 2026 : ಬಿಜೆಪಿ ಒಳರಾಜಕೀಯದಲ್ಲಿ ಮತ್ತೆ ಅಸಮಾಧಾನದ ಸಿಡಿಲು ಗುಡುಗಿದ್ದು, ರೆಬೆಲ್ ಶಾಸಕ ಎಸ್ಟಿ ಸೋಮಶೇಖರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಎಸ್ವೈ ಆಪ್ತ ರುದ್ರೇಶ್ ನೀಡಿದ ಹೇಳಿಕೆಗೆ ಕೆರಳಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಹಿರಂಗ ಪತ್ರ ಬರೆದು 13 ಪ್ರಶ್ನೆಗಳು ಕೇಳಿದ್ದಾರೆ .
“ನಮ್ಮಿಂದಲೇ ನೀವು ಮುಖ್ಯಮಂತ್ರಿ ಆಗಿದ್ದೀರಿ” ಎಂದು ನೆನಪಿಸಿದ ಸೋಮಶೇಖರ್, ಸಂಕಷ್ಟದ ಸಂದರ್ಭಗಳಲ್ಲಿ ತಮಗೆ ಬೆಂಬಲ ನೀಡಲಿಲ್ಲ ಎಂದು ಆರೋಪಿಸಿದ್ದಾರೆ. ಪಕ್ಷದಿಂದ ಉಚ್ಛಾಟನೆ ನಡೆದಾಗಲೂ ನೀವು ನೆರವಿಗೆ ಬರಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇದಲ್ಲದೆ, ನಿಮ್ಮ ಆಪ್ತರಿಂದಲೇ ಪದೇ ಪದೇ ನನಗೆ ಅವಮಾನವಾಗುತ್ತಿದೆ ಎಂದು ದೂರಿರುವ ಅವರು , ರುದ್ರೇಶ್ ಮಾತುಗಳ ಬಗ್ಗೆ ನಿಮ್ಮ ನಿಲುವು ಏನು ? ನಿಮಗೆ ಅದಕ್ಕೆ ಸಹಮತ ಇದೆಯೇ ? ಎಂದು ನೇರವಾಗಿ ಪ್ರಶ್ನಿಸಿದ್ದಾರೆ.
“ಬೂಟ್ ನೆಕ್ಕುವ ಸಂಸ್ಕೃತಿ ಬಿಜೆಪಿಯಲ್ಲಿ ಇದೆಯಾ? ” ಎಂಬ ತೀಕ್ಷ್ಣ ಪ್ರಶ್ನೆಯನ್ನೂ ಎತ್ತಿರುವ ಸೋಮಶೇಖರ್, ಪಕ್ಷದ ಒಳಗಿನ ಪರಿಸ್ಥಿತಿಯನ್ನು ಬಹಿರಂಗಪಡಿಸಿದ್ದಾರೆ.
ಈ ಮೂಲಕ ಒಟ್ಟು 13 ಪ್ರಶ್ನೆಗಳನ್ನು ಎತ್ತಿರುವ ಎಸ್ಟಿ ಸೋಮಶೇಖರ್, ಬಿಎಸ್ವೈಯಿಂದ ಸ್ಪಷ್ಟನೆ ಕೇಳಿದ್ದಾರೆ. ಇದೀಗ ಈ ಪ್ರಶ್ನೆಗಳಿಗೆ ಯಡಿಯೂರಪ್ಪ ಉತ್ತರ ನೀಡಲಿದೆಯೇ? ಅಥವಾ ಮೌನ ವಹಿಸಲಿದೆಯೇ? ಎಂಬುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಒಟ್ಟಾರೆ, ಬಿಜೆಪಿ ಒಳಘರ್ಷಣೆ ಮತ್ತೆ ಹೊರಗೆದ್ದು, ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆಯಲಿದೆ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
