Ashwaveega News 24×7 ಮಾರ್ಚ್ 31 – 2026 : ಬಾಗಲಕೋಟೆ ಬೈಎಲೆಕ್ಷನ್ ಪ್ರಚಾರದ ವೇಳೆ ಮುಖ್ಯಮಂತ್ರಿ Siddaramaiah ಅವರಿಗೆ ಅಭಿಮಾನಿಗಳು ನೀಡಿದ ವಿಶಿಷ್ಟ ಉಡುಗೊರೆ ಎಲ್ಲರ ಗಮನ ಸೆಳೆದಿದೆ.
ಉಮೇಶ್ ಮೇಟಿ ಪರ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ, ಸಭೆಯಲ್ಲಿ “ಟಗರು ಬಂತು ಟಗರು” ಹಾಡು ಮೊಳಗುತ್ತಿದ್ದಂತೆ ಅಭಿಮಾನಿಗಳು ಸಿಎಂಗೆ ಟಗರುಯನ್ನೇ ಗಿಫ್ಟ್ ಆಗಿ ನೀಡಿದ್ದಾರೆ. ವಿಶೇಷವೆಂದರೆ, ಆ ಟಗರಿಗೆ ಕೇಸರಿ ಬಣ್ಣ ಹಚ್ಚಿ ನೀಡಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.
ಮುಗಳೊಳ್ಳಿ ಗ್ರಾಮದಲ್ಲಿ ನಡೆದ ಈ ಘಟನೆ, ರಾಜಕೀಯ ವೇದಿಕೆಯಲ್ಲಿ ವಿಭಿನ್ನ ಕ್ಷಣಕ್ಕೆ ಸಾಕ್ಷಿಯಾಗಿದೆ. ಕೇಸರಿ ಬಣ್ಣದ ಬಗ್ಗೆ ಸದಾ ಕಿಡಿಕಾರುವ ಸಿಎಂಗೆ ಅದೇ ಬಣ್ಣದ ಟಗರು ನೀಡಿರುವುದು ಚರ್ಚೆಗೆ ಕಾರಣವಾಗಿದೆ.
ಪ್ರಚಾರದ ನಡುವೆ ಈ ರೀತಿಯ ವಿಶಿಷ್ಟ ಗಿಫ್ಟ್ ಸಿಕ್ಕಿದ್ದು, ಕಾರ್ಯಕರ್ತರು ಮತ್ತು ಜನರ ನಡುವೆ ಸಂಭ್ರಮದ ವಾತಾವರಣ ನಿರ್ಮಾಣವಾಯಿತು.
ಒಟ್ಟಾರೆ, ಬಾಗಲಕೋಟೆ ಬೈಎಲೆಕ್ಷನ್ ಅಖಾಡದಲ್ಲಿ ರಾಜಕೀಯ ಮಾತ್ರವಲ್ಲ, ಇಂತಹ ವಿಭಿನ್ನ ಘಟನೆಗಳೂ ಜನರ ಗಮನ ಸೆಳೆಯುತ್ತಿವೆ.
