Ashwaveega News 24×7 ಏಪ್ರಿಲ್ 1 – 2026 : ರಾಜ್ಯ ಸರ್ಕಾರದಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರಿಗೆ ದೊಡ್ಡ ಶಾಕ್ ನೀಡಲಾಗಿದೆ. ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ಸಿಬ್ಬಂದಿ ತಮ್ಮ ಸೇವೆ ಖಾಯಂ ಆಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಇದು ನಿರಾಸೆಯ ಸುದ್ದಿ.
ಮುಖ್ಯಮಂತ್ರಿ Siddaramaiah ನೇತೃತ್ವದ ಸರ್ಕಾರ, ಟೆಂಡರ್ ನಿಯಮಗಳ ಕಟ್ಟುನಿಟ್ಟಿನ ಅನುಸರಣೆ ಬಗ್ಗೆ ಖಡಕ್ ಸೂಚನೆ ನೀಡಿದೆ. ಒಪ್ಪಂದದ ಅವಧಿ ಮುಗಿದ ತಕ್ಷಣವೇ ಸಿಬ್ಬಂದಿಯನ್ನು ಸೇವೆಯಿಂದ ಬಿಡುಗಡೆ ಮಾಡಬೇಕು ಎಂದು ಆದೇಶಿಸಿದೆ .
ಸರ್ಕಾರದ ಸೂಚನೆಯ ಪ್ರಕಾರ, ಟೆಂಡರ್ ಅವಧಿ ಪೂರ್ಣಗೊಂಡ ಮರುಕ್ಷಣವೇ ಗುತ್ತಿಗೆ ನೌಕರರ ಸೇವೆ ಸ್ವಯಂಚಾಲಿತವಾಗಿ ಅಂತ್ಯವಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ನೋಟಿಸ್ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಇನ್ನೊಂದೆಡೆ, ಕೆಲವು ಇಲಾಖೆಗಳಲ್ಲಿ ಟೆಂಡರ್ ನಿಯಮಗಳನ್ನು ಉಲ್ಲಂಘಿಸಿರುವುದು ಬೆಳಕಿಗೆ ಬಂದ ಹಿನ್ನೆಲೆ, ಸರ್ಕಾರ ಅಧಿಕಾರಿಗಳಿಗೆ ಕಠಿಣ ಎಚ್ಚರಿಕೆ ನೀಡಿದೆ. ನಿಯಮಗಳನ್ನು ಮೀರಿ ಗುತ್ತಿಗೆ ನೌಕರರನ್ನು ಮುಂದುವರಿಸಿದರೆ, ಅವರ ವೇತನವನ್ನು ಸಂಬಂಧಿತ ಅಧಿಕಾರಿಗಳ ಜೇಬಿನಿಂದಲೇ ವಸೂಲಿ ಮಾಡುವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.
ಈ ನಿರ್ಧಾರದಿಂದ ಸಾವಿರಾರು ಗುತ್ತಿಗೆ ನೌಕರರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದ್ದು, ಸರ್ಕಾರದ ಈ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ.
ಒಟ್ಟಾರೆ, ಟೆಂಡರ್ ವ್ಯವಸ್ಥೆಯನ್ನು ಶಿಸ್ತುಗೊಳಿಸಲು ಸರ್ಕಾರ ಮುಂದಾದರೂ, ಇದರ ಪರಿಣಾಮವಾಗಿ ಗುತ್ತಿಗೆ ನೌಕರರ ಭವಿಷ್ಯ ಅನಿಶ್ಚಿತವಾಗಿರುವುದು ಸ್ಪಷ್ಟವಾಗಿದೆ .
