Ashwaveega News 24×7 ಏಪ್ರಿಲ್ 1 – 2026 : Pakistan ನಲ್ಲಿ ಮತ್ತೆ ಲಾಕ್ಡೌನ್ ಜಾರಿ ಮಾಡುವ ಬಗ್ಗೆ ಗೊಂದಲಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ಏಪ್ರಿಲ್ 4ರಿಂದ “ಸ್ಮಾರ್ಟ್ ಲಾಕ್ಡೌನ್” ಜಾರಿಗೊಳಿಸುವ ಯೋಚನೆ ನಡೆದಿದ್ದು, ಇದಕ್ಕೆ ಪ್ರಮುಖ ಕಾರಣವಾಗಿ ಇಂಧನ ಕೊರತೆ ಮತ್ತು ಆರ್ಥಿಕ ಒತ್ತಡವನ್ನು ಉಲ್ಲೇಖಿಸಲಾಗಿತ್ತು.
ಯುದ್ಧ ಪರಿಸ್ಥಿತಿ ಮತ್ತು ಇಂಧನ ಬಿಕ್ಕಟ್ಟು ಹಿನ್ನೆಲೆ, ವೀಕೆಂಡ್ ಲಾಕ್ಡೌನ್ ಸೇರಿದಂತೆ ಕೆಲವು ನಿರ್ಬಂಧಗಳನ್ನು ಜಾರಿಗೆ ತರಲು ಪಾಕ್ ಸರ್ಕಾರ ಪ್ಲಾನ್ ಮಾಡಿತ್ತು. ದೇಶಾದ್ಯಂತ ಲಾಕ್ಡೌನ್ ಮೂಲಕ ಇಂಧನ ಉಳಿತಾಯ ಮಾಡುವ ಉದ್ದೇಶವೂ ಇದ್ದಿತು.
ಆದರೆ, ಈ ನಿರ್ಧಾರಕ್ಕೆ ವಿವಿಧ ರಾಜ್ಯ ಸರ್ಕಾರಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ಜನಜೀವನ ಮತ್ತು ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಾರಣದಿಂದ ಹಲವು ಪ್ರಾಂತ್ಯಗಳು ವಿರೋಧ ವ್ಯಕ್ತಪಡಿಸಿದವು.
ಈ ಒತ್ತಡದ ನಡುವೆ, ಪಾಕ್ ಕೇಂದ್ರ ಸರ್ಕಾರ ಲಾಕ್ಡೌನ್ ನಿರ್ಧಾರದಿಂದ ಹಿಂದೆ ಸರಿದಿದೆ. “ಸದ್ಯ ಯಾವುದೇ ಶಟ್ಡೌನ್ ಅಥವಾ ಸಂಪೂರ್ಣ ಲಾಕ್ಡೌನ್ ಇಲ್ಲ” ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.
ಒಟ್ಟಾರೆ, ಇಂಧನ ಸಂಕಷ್ಟ ಮತ್ತು ಆರ್ಥಿಕ ಪರಿಸ್ಥಿತಿಯಿಂದ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ, ಲಾಕ್ಡೌನ್ ಕುರಿತು ತೀರ್ಮಾನ ಇನ್ನೂ ಅನಿಶ್ಚಿತವಾಗಿದ್ದು, ಮುಂದಿನ ಬೆಳವಣಿಗೆಗಳ ಮೇಲೆ ಎಲ್ಲರ ಗಮನ ನೆಟ್ಟಿದೆ.
