Ashwaveega News 24×7 ಏಪ್ರಿಲ್ 1 – 2026 : ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಖರೀದಿಸಲು ಯೋಜನೆ ಮಾಡುತ್ತಿದ್ದವರಿಗೆ ಮತ್ತೊಂದು ದೊಡ್ಡ ಶಾಕ್ ಎದುರಾಗಿದೆ. ಇತ್ತೀಚೆಗೆ ಇಳಿಕೆಯಾಗುತ್ತಿದ್ದ ಬಂಗಾರ ಮತ್ತು ಸಿಲ್ವರ್ ದರಗಳು ಇದೀಗ ಮತ್ತೆ ಏರಿಕೆಯಾಗುತ್ತಿವೆ.
ಮಧ್ಯಪ್ರಾಚ್ಯದ ಸಂಘರ್ಷದಿಂದ ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದ್ದು, ಅದರ ಪರಿಣಾಮವಾಗಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಏರಿಕೆ ಕಂಡುಬಂದಿದೆ. ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲ್ಪಡುವ ಚಿನ್ನದ ಬೇಡಿಕೆ ಹೆಚ್ಚಾದ ಹಿನ್ನೆಲೆ ದರದಲ್ಲಿ ಜಿಗಿತವಾಗಿದೆ.
ಸದ್ಯ 10 ಗ್ರಾಂ ಚಿನ್ನದ ಬೆಲೆ ಸುಮಾರು ₹1,50,000 ಮಟ್ಟ ತಲುಪಿದ್ದು, ಖರೀದಿದಾರರಿಗೆ ಭಾರೀ ಹೊರೆ ತಂದಿದೆ. ಇದೇ ವೇಳೆ ಬೆಳ್ಳಿ ದರವೂ ಏರಿಕೆಯಾಗಿದ್ದು, ಪ್ರತಿ ಕಿಲೋಗೆ ಸುಮಾರು ₹1,40,000 ಆಗಿದೆ.
ಕಳೆದ ಎರಡು ದಿನಗಳಲ್ಲಿ ಮಾತ್ರ ಬೆಳ್ಳಿ ದರದಲ್ಲಿ ಸುಮಾರು ₹10,000 ಏರಿಕೆ ಕಂಡುಬಂದಿರುವುದು ಗಮನಾರ್ಹವಾಗಿದೆ. ಯುದ್ಧದ ಪರಿಣಾಮದಿಂದ ಕೆಲ ದಿನಗಳ ಹಿಂದೆ ಕುಸಿತ ಕಂಡಿದ್ದ ಸಿಲ್ವರ್ ದರ ಇದೀಗ ಮತ್ತೆ ಚೇತರಿಸಿಕೊಂಡು ಏರಿಕೆಯಾಗುತ್ತಿದೆ.
ಜಾಗತಿಕ ಅನಿಶ್ಚಿತತೆ ಮುಂದುವರಿದರೆ ಚಿನ್ನ ಮತ್ತು ಬೆಳ್ಳಿ ದರಗಳು ಇನ್ನಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ. ಇದರಿಂದ ಹೂಡಿಕೆದಾರರು ಮತ್ತು ಸಾಮಾನ್ಯ ಖರೀದಿದಾರರು ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕಾಗಿದೆ.
