Ashwaveega News 24×7 ಏಪ್ರಿಲ್ 1 – 2026 : ಯುದ್ಧದ ಪರಿಣಾಮ ಇದೀಗ ನೇರವಾಗಿ ಆಟೋ ಚಾಲಕರ ಜೀವನದ ಮೇಲೆ ಹೊಡೆತ ನೀಡುತ್ತಿದೆ. ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಸಿಎನ್ಜಿ ಕೊರತೆಯಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ “ಗ್ಯಾಸ್ ಎಮೆರ್ಜೆನ್ಸಿ” ಸ್ಥಿತಿ ನಿರ್ಮಾಣವಾಗಿದೆ.
ಆಟೋಗಳಿಗೆ ಗ್ಯಾಸ್ ಸಿಗದ ಕಾರಣ, ಚಾಲಕರು ಬಂಕ್ಗಳ ಮುಂದೆ ಕಿಲೋಮೀಟರ್ ಗಟ್ಟಲೆ ಸಾಲಿನಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ. ಸಿಎನ್ಜಿ ಲಭ್ಯವಿಲ್ಲದ ಕಾರಣ ದಿನಗೂಲಿ ಆಧಾರಿತ ಚಾಲಕರ ಆದಾಯ ಸಂಪೂರ್ಣ ಕುಸಿದಿದೆ.
ಇದರಿಂದ ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಹಲವಾರು ಚಾಲಕರು ತಮ್ಮ ಆಟೋಗಳ ಮೇಲೆ ಪಡೆದಿರುವ ಸಾಲದ EMI ಕಟ್ಟಲು ಸಹ ಸಾಧ್ಯವಾಗುತ್ತಿಲ್ಲ. ಗ್ಯಾಸ್ ಇಲ್ಲದೆ ಬಾಡಿಗೆ ಓಡಿಸಲು ಆಗದ ಕಾರಣ, ಅವರ ತುತ್ತಿನ ಚೀಲಕ್ಕೂ ಹೊಡೆತ ಬಿದ್ದಿದೆ.
ಈ ನಡುವೆ, ಕೆಲವೆಡೆ ಸಿಎನ್ಜಿ ಕೊರತೆಯ ಮಧ್ಯೆ ಹೆಚ್ಚುವರಿ ದರ ವಸೂಲಿ ಆಗುತ್ತಿರುವುದಾಗಿ ಚಾಲಕರು ಆರೋಪಿಸುತ್ತಿದ್ದಾರೆ. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ತಕ್ಷಣ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
“ ಬಡವರು ಬದುಕೋದು ಹೇಗೆ ? ” ಎಂಬ ಪ್ರಶ್ನೆಯನ್ನು ಆಟೋ ಚಾಲಕರು ಸರ್ಕಾರದ ಮುಂದೆ ಇಟ್ಟಿದ್ದಾರೆ. ತುರ್ತು ಕ್ರಮ ಕೈಗೊಳ್ಳದಿದ್ದರೆ ಈ ಸಂಕಷ್ಟ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ.
