ಬೆಂಗಳೂರಿನಲ್ಲಿ ಎಲ್ಪಿಜಿ ಕೊರತೆ ಮತ್ತು ಸೀಮಿತ ಸ್ಟಾಕ್ ಲಭ್ಯತೆಯ ನಡುವೆ ಹಲವಾರು ಆಟೋರಿಕ್ಷಾಗಳು ಎಲ್ಪಿಜಿ ಫಿಲ್ಲಿಂಗ್ ಸ್ಟೇಷನ್ನ ಹೊರಗೆ ರಿಕ್ಷಾ ಡ್ರೈವರ್ ಪರೆದಾಡಿದರು. ಪ್ರಜಾವಾಣಿ ಚಿತ್ರ.
Ashwaveega News 24×7 ಏಪ್ರಿಲ್ 2 – 2026 : ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಿಎನ್ಜಿ (CNG) ಕೊರತೆ ತೀವ್ರಗೊಂಡಿದ್ದು, ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ಯಾಸ್ಗಾಗಿ ಕಿಲೋಮೀಟರ್ಗಟ್ಟಲೇ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ನಾಗರಬಾವಿ ಸರ್ಕಲ್ನಿಂದ ಕಲ್ಯಾಣನಗರದವರೆಗೆ ಸಿಎನ್ಜಿ ಪಡೆಯಲು ವಾಹನಗಳ ದೀರ್ಘ ಸಾಲು ಕಂಡುಬರುತ್ತಿದೆ. ಬೆಳಿಗ್ಗೆ 4 ಗಂಟೆಯಿಂದಲೇ ಚಾಲಕರು ಕ್ಯೂನಲ್ಲಿ ನಿಂತರೂ ಗಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಕೆಲವೆಡೆ ಈ ಸಾಲು 2 ಕಿಲೋಮೀಟರ್ವರೆಗೆ ವಿಸ್ತರಿಸಿದೆ.
ಗ್ಯಾಸ್ ಕೊರತೆಯಿಂದ ಆಟೋ ಚಾಲಕರ ದೈನಂದಿನ ಜೀವನವೇ ಅಸ್ತವ್ಯಸ್ತವಾಗಿದೆ. ಸಿಎನ್ಜಿ ಸಿಗದ ಕಾರಣ ಬಾಡಿಗೆಗೆ ಹೋಗಲು ಸಾಧ್ಯವಾಗದೆ, ಆದಾಯಕ್ಕೆ ಭಾರೀ ಹೊಡೆತ ಬೀಳುತ್ತಿದೆ. ಹಲವರು ದಿನಪೂರ್ತಿ ಗ್ಯಾಸ್ಗಾಗಿ ಕಾಯುವುದರಲ್ಲಿ ಸಮಯ ಕಳೆಯುವಂತಾಗಿದೆ.
ಎಲ್ಪಿಜಿ (LPG) ಕೊರತೆ ಹಿನ್ನೆಲೆ ಈ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ. ಗ್ಯಾಸ್ ಪೂರೈಕೆ ಸರಿಯಾಗದ ಕಾರಣ ಚಾಲಕರು ಬೀದಿಗಿಳಿದು ಸಂಕಷ್ಟ ಅನುಭವಿಸುತ್ತಿದ್ದಾರೆ.
ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಗ್ಯಾಸ್ ಪೂರೈಕೆಯನ್ನು ಸುಧಾರಿಸಬೇಕು ಎಂಬುದು ಆಟೋ ಚಾಲಕರ ಒತ್ತಾಯವಾಗಿದೆ.
