Ashwaveega News 24×7 ಏಪ್ರಿಲ್ 2 – 2026 : ದಾವಣಗೆರೆ : ಇಂದು ದಾವಣಗೆರೆಯಲ್ಲಿ ಸಿದ್ದರಾಮಯ್ಯ ಭಾರಿ ಕ್ಯಾಂಪೇನ್ ನಡೆಸಲಿದ್ದು, “ಕೈ” ಅಭ್ಯರ್ಥಿ ಸಮರ್ಥ್ ಗೆಲುವಿಗಾಗಿ ರೋಡ್ ಶೋ ನಡೆಸುತ್ತಿದ್ದಾರೆ. ಮಧ್ಯಾಹ್ನ 2 ಗಂಟೆಯಿಂದಲೇ ರೋಡ್ ಶೋ ಆರಂಭವಾಗಿದ್ದು, ಸಂಜೆ 7 ಗಂಟೆಗೆ ಸಾರ್ವಜನಿಕ ಸಭೆಯ ಮೂಲಕ ಮತಬೇಟೆ ಮುಂದುವರಿಯಲಿದೆ.
ಚಾಮರಾಜಪೇಟೆ, ಮದೀನ ವೃತ್ತ, ಆಜಾದ್ ನಗರ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಸಿದ್ದರಾಮಯ್ಯ ರೋಡ್ ಶೋ ನಡೆಸಿ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ. ಬೃಹತ್ ಜನಸ್ತೋಮ ಸೇರುವ ನಿರೀಕ್ಷೆ ಇದೆ.
ಟಿಕೆಟ್ ವಿಚಾರದಲ್ಲಿ ಅಸಮಾಧಾನಗೊಂಡಿದ್ದ ಮುಸ್ಲಿಂ ನಾಯಕರ ಸಿಟ್ಟನ್ನು ಶಮನಗೊಳಿಸಲು “ಟಗರು” ಎಂದೇ ಖ್ಯಾತರಾದ ಸಿದ್ದರಾಮಯ್ಯ ವಿಶೇಷ ರಣತಂತ್ರ ರೂಪಿಸುತ್ತಿದ್ದಾರೆ ….
ಕಳೆದ ಮೂರು ದಿನಗಳಿಂದ ನಿರಂತರ ಪ್ರಚಾರದಲ್ಲಿ ತೊಡಗಿರುವ ಸಿಎಂ, ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿ ಚುನಾವಣಾ ತಂತ್ರ ರೂಪಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ತನ್ನ ಬಲಕೋಟೆಯನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.
ಒಟ್ಟಿನಲ್ಲಿ, ದಾವಣಗೆರೆ ಬೈಎಲೆಕ್ಷನ್ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಸಿದ್ದರಾಮಯ್ಯ ಕ್ಯಾಂಪೇನ್ ಗಮನ ಸೆಳೆಯುತ್ತಿದೆ.
