Ashwaveega News 24×7 ಏಪ್ರಿಲ್ 3 – 2026 : ದಾವಣಗೆರೆ : ತಮ್ಮ ವಿರುದ್ಧ ನಡೆದ ಪ್ರತಿಭಟನೆಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದು, ರಾಜಕೀಯ ವಾತಾವರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
“ಓ ದೇವರೇ.. ನನಗೆ ಚಪ್ಪಲಿ ತೋರಿಸಿದ ಬಿಜೆಪಿಗರನ್ನು ಕ್ಷಮಿಸು . ಆ ಪಾಪದ ಪರಿಣಾಮ ಅವರ ಮೇಲೆ ಬೀಳಬಾರದು, ಅವರಿಗೆ ಒಳ್ಳೆಯದಾಗಲಿ” ಎಂದು ಅವರು ವ್ಯಂಗ್ಯವಾಗಿ ಹೇಳಿದ್ದಾರೆ.
ತಮ್ಮ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರ ಕುರಿತು ಮಾತನಾಡಿದ ಅವರು, “ನಾನು ಗಾಂಧಿಜೀ ತತ್ವಗಳನ್ನು ಅನುಸರಿಸುತ್ತೇನೆ. ನಾವು ಶಾಂತಿಪ್ರಿಯರು. ಅವರು ಕರೆ ಮಾಡಿದಂತೆ ಬಿಜೆಪಿ ಕಚೇರಿ ಬಳಿ ಹೋಗಿದ್ದೆ, ಆದರೆ ಏನೂ ಆಗಲಿಲ್ಲ” ಎಂದು ಹೇಳಿದರು.
“ಸಮಾಧಿಗೆ ಹೋಗುವವರೆಗೂ ಭುಜ ತಟ್ಟುತ್ತಲೇ ಇರುತ್ತೇನೆ” ಎಂದು ಹೇಳಿದ ಅವರು, ತಮ್ಮ ಶಾಂತಿಯುತ ನಿಲುವನ್ನು ಒತ್ತಿ ಹೇಳಿದರು. ಆದರೆ, “ನನ್ನ ಪಕ್ಷದ ತಂಟೆಗೆ ಯಾರೇ ಬಂದರೂ ಕೌಂಟರ್ ಕೊಡುತ್ತೇನೆ” ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ, ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಸಮರ್ಥ್ ಭರ್ಜರಿ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, “50 ಸಾವಿರ ಮತಗಳ ಅಂತರದಿಂದ ಗೆಲುವು ಖಚಿತ” ಎಂದು ಹೇಳಿದರು.
ಅಶ್ವವೇಗ ನ್ಯೂಸ್ ಜೊತೆ ಮಾತನಾಡಿದ ಪ್ರದೀಪ್ ಈಶ್ವರ್, ತಮ್ಮ ರಾಜಕೀಯ ನಿಲುವು ಮತ್ತು ಎದುರಾಳಿಗಳಿಗೆ ನೀಡಿದ ಪ್ರತಿಕ್ರಿಯೆ ಮೂಲಕ ಗಮನ ಸೆಳೆದಿದ್ದಾರೆ.
