Ashwaveega News 24×7 ಏಪ್ರಿಲ್ 4 – 2026 : ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಳ್ಳುತ್ತಿರುವ ನಡುವೆಯೇ, United States ವಿರುದ್ಧದ ಯುದ್ಧದಲ್ಲಿ Iran ಭಾರೀ ಪ್ರತಿದಾಳಿ ನಡೆಸಿದ ಆರೋಪ ಕೇಳಿಬಂದಿದೆ .
ಮಾಹಿತಿಯ ಪ್ರಕಾರ, ಒಂದೇ ಸಮಯದಲ್ಲಿ ಅಮೆರಿಕಾದ ಎರಡು ಯುದ್ಧ ವಿಮಾನಗಳ ಮೇಲೆ ಇರಾನ್ ದಾಳಿ ನಡೆಸಿದೆ ಎನ್ನಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ F-15E Strike Eagle ವಿಮಾನ ಗುರಿಯಾಗಿದ್ದು, ಅದರಲ್ಲಿದ್ದ ಪೈಲಟ್ ಮತ್ತು ವೆಪನ್ ಸಿಸ್ಟಮ್ ಅಧಿಕಾರಿ ಪೈಕಿ ಒಬ್ಬರು ಸುರಕ್ಷಿತವಾಗಿರುವುದಾಗಿ ಹೇಳಲಾಗಿದೆ. ಇನ್ನೊಬ್ಬ ಅಧಿಕಾರಿ ಕಾಣೆಯಾಗಿದ್ದು, ಅವರನ್ನು ಇರಾನ್ ಬಂಧಿಸಿದ್ದೇ ಎಂಬ ಅನುಮಾನ ವ್ಯಕ್ತವಾಗಿದೆ .
ಇದೇ ವೇಳೆ, Strait of Hormuz ಸಮೀಪದಲ್ಲೂ ಮತ್ತೊಂದು ಘಟನೆ ನಡೆದಿದೆ . A-10 Thunderbolt II ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂಬ ವರದಿಗಳು ಬಂದಿವೆ. ಈ ವಿಮಾನದ ಅವಶೇಷಗಳು Kuwait ನಲ್ಲಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಅದೃಷ್ಟವಶಾತ್, A-10 ವಿಮಾನದ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ಹೇಳಿವೆ. ವಿಶೇಷವೆಂದರೆ, ಈ ಎರಡು ದಾಳಿಗಳೂ ಬಹುತೇಕ ಒಂದೇ ಸಮಯದಲ್ಲಿ ನಡೆದಿರುವುದು ಆತಂಕ ಹೆಚ್ಚಿಸಿದೆ.
ಸತತ ದಾಳಿಗಳ ಹಿನ್ನೆಲೆಯಲ್ಲಿ ಅಮೆರಿಕಾ ಸೇನೆಗೆ ಹಿನ್ನಡೆಯಾಗುತ್ತಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿದ್ದು, ಈ ಬೆಳವಣಿಗೆಗಳು ಜಾಗತಿಕ ರಾಜಕೀಯದಲ್ಲಿ ದೊಡ್ಡ ತಿರುವು ತರಬಹುದೆಂಬ ಚರ್ಚೆ ಶುರುವಾಗಿದೆ.
