Ashwaveega News 24×7 ಏಪ್ರಿಲ್ 4 – 2026 : ಬಾಗಲಕೋಟೆ : ಬೈಎಲೆಕ್ಷನ್ ಕಣದಲ್ಲೇ ಕಾಂಗ್ರೆಸ್ಗೆ ಅಚ್ಚರಿಯ ರಾಜಕೀಯ ಬೆಳವಣಿಗೆ ಎದುರಾಗಿದ್ದು, ಸಿಎಂ Siddaramaiah ಅವರ ಒಂದು ಹೇಳಿಕೆ ಪಕ್ಷದೊಳಗೆ ಚರ್ಚೆಗೂ, ಅಸಮಾಧಾನಕ್ಕೂ ಕಾರಣವಾಗಿದೆ.
ಬಾಗಲಕೋಟೆ ಪ್ರಚಾರದ ವೇಳೆ ಮಾತನಾಡಿದ ಸಿಎಂ, 2028ರ ವಿಧಾನಸಭೆ ಚುನಾವಣೆಯಲ್ಲೂ Umesh Methi ಅವರೇ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಣೆ ಮಾಡಿದರು. ಇನ್ನೂ ಬೈಎಲೆಕ್ಷನ್ ನಡೆಯುವ ಹಂತದಲ್ಲೇ ಮುಂದಿನ ಚುನಾವಣೆಯ ಅಭ್ಯರ್ಥಿಯನ್ನು ಘೋಷಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಈ ಹೇಳಿಕೆ ಕಾಂಗ್ರೆಸ್ನೊಳಗಿನ ಟಿಕೆಟ್ ಆಕಾಂಕ್ಷಿಗಳಿಗೆ ಭಾರೀ ನಿರಾಸೆ ತಂದಿದೆ. ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ Mallikarjun Charantimath, Santosh Hokrani, Veena Kashappanavar ಹಾಗೂ Rakshita Iti ಸೇರಿದಂತೆ ಹಲವು ಮುಖಂಡರು ಸಿಎಂ ಹೇಳಿಕೆಯಿಂದ ಅಸಮಾಧಾನಗೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ ..
ಪಕ್ಷದ ಒಳಗಿನ ಕೆಲವರು, ಉಮೇಶ್ ಮೇಟಿ ಅವರು ರಾಜಕೀಯವಾಗಿ ಚತುರರಲ್ಲ, ಪ್ರಭಾವಿ ಭಾಷಣಕಾರರಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಇದೇ ಕಾರಣದಿಂದ ಮುಂದಿನ ಚುನಾವಣೆಯಲ್ಲಿ ಅವಕಾಶ ಸಿಗಬಹುದು ಎಂದು ನಿರೀಕ್ಷಿಸಿದ್ದರು. ಆದರೆ ಸಿಎಂ ಘೋಷಣೆ ಅವರ ನಿರೀಕ್ಷೆಗಳಿಗೆ ದೊಡ್ಡ ಹೊಡೆತ ನೀಡಿದಂತಾಗಿದೆ.
ಈ ಅಸಮಾಧಾನ ಬೈಎಲೆಕ್ಷನ್ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. ಸ್ಥಳೀಯ ನಾಯಕರು ಸಂಪೂರ್ಣ ಮನಸ್ಸಿನಿಂದ ಪ್ರಚಾರದಲ್ಲಿ ತೊಡಗಿಸಿಕೊಳ್ಳದಿದ್ದರೆ, ಕಾಂಗ್ರೆಸ್ ಅಭ್ಯರ್ಥಿಗೆ ಒಳೇಟಿನ ಶಾಕ್ ಎದುರಾಗುವ ಸಾಧ್ಯತೆಯನ್ನು ರಾಜಕೀಯ ವಿಶ್ಲೇಷಕರು ಸೂಚಿಸುತ್ತಿದ್ದಾರೆ.
ಒಟ್ಟಿನಲ್ಲಿ, ಸಿಎಂ ಹೇಳಿಕೆ ನಾಯಕತ್ವದ ಸ್ಪಷ್ಟತೆಯ ಸಂಕೇತವೇ ? ಅಥವಾ ಚುನಾವಣಾ ತಂತ್ರದಲ್ಲಿ ಯಡವಟ್ಟೇ? ಎಂಬ ಪ್ರಶ್ನೆ ಈಗ ಬಾಗಲಕೋಟೆ ಕಾಂಗ್ರೆಸ್ನಲ್ಲಿ ಹಾಟ್ ಟಾಪಿಕ್ ಆಗಿದೆ.
