Ashwaveega News 24×7 ಏಪ್ರಿಲ್ 5 – 2026 : ದಾವಣಗೆರೆ : ಬೈಎಲೆಕ್ಷನ್ ಅಖಾಡ ದಿನೇ ದಿನೇ ರಂಗೇರಿಸುತ್ತಿದ್ದು, ಇದೀಗ ಸಚಿವ Zameer Ahmed Khan ಎಂಟ್ರಿಯಿಂದ ರಾಜಕೀಯ ಸಮೀಕರಣಗಳಲ್ಲಿ ದೊಡ್ಡ ಬದಲಾವಣೆ ಕಂಡುಬರುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ S.M. ಸಮರ್ಥ್ ಪರವಾಗಿ ಜಮೀರ್ ಕ್ಯಾಂಪೇನ್ ನಡೆಸುತ್ತಿರುವುದು ಕಣದ ಚಿತ್ರಣವನ್ನೇ ಬದಲಾಯಿಸುವ ಲಕ್ಷಣ ನೀಡಿದೆ.
ಜಮೀರ್ ಎಂಟ್ರಿ ವೇಳೆ ಕೆಲವೊಂದು ಹೈಡ್ರಾಮಾ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದುವರೆಗೆ ಸಚಿವ Shamanur Shivashankarappa (SSM) ಜೊತೆ ಇದ್ದ ಮುನಿಸು ಈಗ ಮರೆತು, ಪಕ್ಷದ ಗೆಲುವಿಗಾಗಿ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ .
ಮುಖ್ಯವಾಗಿ ಅಲ್ಪಸಂಖ್ಯಾತರು ಹೆಚ್ಚಾಗಿ ಇರುವ ಪ್ರದೇಶಗಳಲ್ಲಿ ಜಮೀರ್ ಭರ್ಜರಿ ಪ್ರಚಾರ ಕೈಗೊಂಡಿದ್ದು, ಮುಸ್ಲಿಂ ಮತದಾರರನ್ನು ಸೆಳೆಯಲು ವಿಶೇಷ ರಣತಂತ್ರ ರೂಪಿಸಲಾಗಿದೆ. “ಕೈ” ಟಿಕೆಟ್ ವಿಚಾರದಲ್ಲಿ ಅಸಮಾಧಾನಗೊಂಡು ರೆಬೆಲ್ ಆಗಿದ್ದ ಕೆಲ ಮುಸ್ಲಿಂ ಮುಖಂಡರ ಜೊತೆ ಸಂಧಾನ ಸಭೆಗಳನ್ನು ನಡೆಸಲಾಗಿದೆ.
ಸಮರ್ಥ್ ಗೆಲುವಿಗಾಗಿ ಕಾಂಗ್ರೆಸ್ ಪಕ್ಷ ಕೊನೆ ಕ್ಷಣದಲ್ಲಿ ಗೇಮ್ಪ್ಲಾನ್ ರೂಪಿಸಿದ್ದು, ಪ್ರಮುಖ ಏರಿಯಾಗಳಲ್ಲಿ ರೋಡ್ ಶೋ ಹಾಗೂ ಸಭೆಗಳ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಜೋರಾಗಿದೆ.
ಜಮೀರ್ ಎಂಟ್ರಿಯಿಂದ ದಾವಣಗೆರೆ ಉಪಸಮರದ ಸೀನ್ ಚೇಂಜ್ ಆಗಿದ್ದು, ಮುಂದಿನ ದಿನಗಳಲ್ಲಿ ಮತದಾನದ ಸಮೀಕರಣದಲ್ಲಿ ದೊಡ್ಡ ಟ್ವಿಸ್ಟ್ ಆಗುವ ಸಾಧ್ಯತೆ ಇದೆ .
