Ashwaveega News 24×7 ಏಪ್ರಿಲ್ 5 – 2026 : ಬೆಂಗಳೂರು : ಮೂರೂವರೆ ವರ್ಷದ ಪುಟಾಣಿ ಲಿಶಾನ್ ಡಿ ಜೈನ್ ಅವರ RCBಗೆ ನೀಡಿದ ಶುಭಾಶಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ. Royal Challengers Bengaluru ತಂಡದ ಜೆರ್ಸಿ ತೊಟ್ಟು, ಕೈಯಲ್ಲಿ ಟ್ರೋಫಿ ಹಿಡಿದು ಫೋಟೋ ಶೂಟ್ ಮಾಡಿದ ಈ ಪುಟಾಣಿ, ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವ ಮೂಲಕ ತಮ್ಮ ಕ್ರಿಕೆಟ್ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ .
ವಿದ್ಯಾರಣ್ಯಪುರದ ಅರುಣಾ ದಂಪತಿಯ ಪುತ್ರನಾದ ಲಿಶಾನ್, ಇಂದು ನಡೆಯಲಿರುವ RCB ಮತ್ತು Chennai Super Kings ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ವಿಶೇಷವಾಗಿ ಹಾರೈಸಿದ್ದಾನೆ. “RCB ಗೆದ್ದು ಬರಲಿ” ಎಂದು ಪ್ರಾರ್ಥಿಸಿರುವ ದೃಶ್ಯಗಳು ಅಭಿಮಾನಿಗಳ ಮನಸೆಳೆದಿವೆ.
ಈ ಕ್ಯೂಟ್ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ರೆಡ್ ಆರ್ಮಿ ಫ್ಯಾನ್ಸ್ಗಳಲ್ಲೂ ಸಂತೋಷದ ಅಲೆ ಹರಡಿಸಿದೆ.
ಒಟ್ಟಿನಲ್ಲಿ, ದೊಡ್ಡ ಸ್ಟೇಡಿಯಂ ಕದನಕ್ಕೂ ಮುನ್ನವೇ ಚೋಟಾ ಫ್ಯಾನ್ನಿಂದ RCBಗೆ ಸಿಕ್ಕಿರುವ ಈ ಹಾರೈಕೆ ಎಲ್ಲರ ಗಮನ ಸೆಳೆಯುತ್ತಿದೆ.
